ಕೇರಳ ಮಾದರಿ ನಡೆ: ಯುವ ವಕೀಲರಿಗೆ 3000/- ಮಾಸಾಶನಕ್ಕೆ ಗ್ರೀನ್ ಸಿಗ್ನಲ್
ಕೇರಳ ಮಾದರಿ ನಡೆ: ಯುವ ವಕೀಲರಿಗೆ 3000/- ಮಾಸಾಶನಕ್ಕೆ ಗ್ರೀನ್ ಸಿಗ್ನಲ್
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಯುವ ವಕೀಲರಿಗೆ ರೂ. 3000/- ಮಾಸಾಶನ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
ವಕೀಲರು ಮೂರು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ 30 ವರ್ಷದೊಳಗಿನ ವಕೀಲರು ಈ ಪ್ರಯೋಜನ ಪಡೆಯಲು ಅರ್ಹರು. ಅವರ ಕುಟುಂಬದ ಆದಾಯ ವರ್ಷಕ್ಕೆ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ಆದರೆ, ಈ ಆದೇಶದ ಆದಾಯದ ಷರತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ವಕೀಲರಿಗೆ ಅನ್ವಯಿಸುವುದಿಲ್ಲ.
ಕೇರಳ ಸರ್ಕಾರ ಜೂನ್ 26ರಂದು ಈ ಬಗ್ಗೆ ಆದೇಶ ಹೊರಡಿಸಿದೆ.
ವರ್ಷಕ್ಕೆ ಕುಟುಂಬದ ಆದಾಯ ರೂ. 1 ಲಕ್ಷ ರೂ. ಗಿಂತ ಕಡಿಮೆ ಇರುವ ಯುವ ವಕೀಲರಿಗೆ ರೂ. 5000/- ಮಾಸಾಶನ ನೀಡುವುದಕ್ಕೆ ಕೇರಳ ವಕೀಲರ ಪರಿಷತ್ ಹೊರಡಿಸಿರುವ ಕೇರಳ ವಕೀಲರ ಮಾಸಾಶನ ನಿಯಮಗಳಿಗೆ ಅನುಗುಣವಾಗಿ ಸರ್ಕಾರ ಈ ಆದೇಶ ಹೊರಡಿಸಿದೆ.
ಕೇರಳ ವಕೀಲರ ಕಲ್ಯಾಣ ನಿಧಿಯಿಂದ ಈ ಹಣವನ್ನು ಯುವ ವಕೀಲರಿಗೆ ಮಾಸಾಶನ ನೀಡಲು ವಿಶ್ವಸ್ಥ ಮಂಡಳಿ ನಿರ್ಧರಿಸಿದೆ.
ಕರ್ನಾಟಕದಲ್ಲೂ ಇದೇ ರೀತಿಯ ನಿರ್ಧಾರವನ್ನು ಅನುಸರಿಸಲು ರಾಜ್ಯ ವಕೀಲರ ಪರಿಷತ್ತು ದಿಟ್ಟ ನಿರ್ಧಾರ ಕೈಗೊಳ್ಳಲಿ ಮತ್ತು ವಕೀಲರ ಕಲ್ಯಾಣ ನಿಧಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಯುವ ವಕೀಲರ ಕ್ಷೇಮಾಭಿವೃದ್ಧಿಗೆ ಬಳಕೆಯಾಗಲಿ ಎಂಬುದು ಎಲ್ಲರ ಆಶಯ.