-->
ಸಾರ್ವಜನಿಕ ಹಿತದೃಷ್ಟಿಯಿಂದ ACB ಮುಖ್ಯಸ್ಥರ ನೇಮಕಕ್ಕೆ ಮಾರ್ಗಸೂಚಿ: ಕರ್ನಾಟಕ ಹೈಕೋರ್ಟ್

ಸಾರ್ವಜನಿಕ ಹಿತದೃಷ್ಟಿಯಿಂದ ACB ಮುಖ್ಯಸ್ಥರ ನೇಮಕಕ್ಕೆ ಮಾರ್ಗಸೂಚಿ: ಕರ್ನಾಟಕ ಹೈಕೋರ್ಟ್

ಸಾರ್ವಜನಿಕ ಹಿತದೃಷ್ಟಿಯಿಂದ ACB ಮುಖ್ಯಸ್ಥರ ನೇಮಕಕ್ಕೆ ಮಾರ್ಗಸೂಚಿ: ಕರ್ನಾಟಕ ಹೈಕೋರ್ಟ್





ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅತ್ಯುನ್ನತ ಹುದ್ದೆಗೆ ಅಧಿಕಾರಿ ನೇಮಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಮೂಲಕ ನಿರ್ದೇಶನ ನೀಡಿದೆ.


ACBಯ ಉನ್ನತ ಹುದ್ದೆಗೆ ಪಾರದರ್ಶನಕತೆ, ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮಾನದಂಡವಾಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.


ಭಾರೀ ಸುದ್ದಿ ಮಾಡಿರುವ ಬೆಂಗಳೂರು ಡಿಸಿ ಕಚೇರಿಯಲ್ಲಿ ಸಹಾಯಕರಾಗಿದ್ದ ಉಪ ತಹಶೀಲ್ದಾರ್‌ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾ. ಎಚ್.ಪಿ. ಸಂದೇಶ್‌ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿ ಅವರಿಗೆ ಈ ಮಾರ್ಗಸೂಚಿಯನ್ನು ನೀಡಿದ್ದಾರೆ.


ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗೆ ರೂಪಿಸಲಾಗಿರುವ ಸಂಸ್ಥೆಗೆ ಉನ್ನತ ಹುದ್ದೆಗೆ ನೇಮಕವಾಗುವ ಅಧಿಕಾರಿ ವಿಶ್ವಾಸಾರ್ಹತೆ ಹೊಂದಿರಬೇಕು. ಸಂಸ್ಥೆಯ ಘನತೆಯನ್ನು ಎತ್ತರಿಸುವುದನ್ನು ಪರಿಗಣಿಸಬೇಕು.


ACBಯಂತಹ ಸಂಸ್ಥೆಗಳ ಉನ್ನತ ಸ್ಥಾನಕ್ಕೆ ಪರಿಗಣಿಸುವ ಅಧಿಕಾರಿಯ ಸೇವಾ ದಾಖಲೆ ಮತ್ತು ಅಧಿಕಾರಿಯ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಮುಖ್ಯ ಕಾರ್ಯದರ್ಶಿ ಮುಂದಿಡಬೇಕು. ಜನರ ಹಿತದೃಷ್ಟಿಯಿಂದಾಗಿ ಯಾವುದೇ ಆಮಿಷ ಯಾ ಒತ್ತಡಕ್ಕೆ ಮಣಿಯಬಾರದು. ನೇಮಕ ವಿಚಾರದಲ್ಲಿ ಡಿಪಿಎಆರ್ ಯಾವುದೇ ಆಂತರಿಕ ಯಾ ಬಾಹ್ಯ ಒತ್ತಡಕ್ಕೆ ಮಣಿಯಬಾರದು.


ACBಯ ಉನ್ನತ ಹುದ್ದೆಗೆ ನೇಮಕವಾಗುವ ಅಧಿಕಾರಿಯ ಕುಟುಂಬದ ಯಾವುದೇ ಸದಸ್ಯರು ACB ಯಾ ಲೋಕಾಯುಕ್ತದಿಂದ ತನಿಖೆ ಎದುರಿಸುತ್ತಿರಬಾರದು.


ಈ ಮಾರ್ಗಸೂಚಿ ಕುರಿತ ಆದೇಶವನ್ನು ರಿಜಿಸ್ಟ್ರಾರ್ ಅವರು ಮುಖ್ಯ ಕಾರ್ಯದರ್ಶಿ ಮತ್ತು DPAR ಕಾರ್ಯದರ್ಶಿಗೆ ತಿಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.


ಪವಿತ್ರವಾದ ಭ್ರಷ್ಟಾಚಾರ ನಿಯಂತ್ರಣದ ಸಂಸ್ಥೆಗೆ ಅಧಿಕಾರಿ ನೇಮಿಸುವಾಗ ಸಾರ್ವಜನಿಕ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಕಳಂಕಿತ ಅಧಿಕಾರಿಗಳನ್ನು ಯಾವುದೇ ಕಾರನಕ್ಕೂ ನೇಮಕ ಮಾಡಬಾರದು ಎಂದು ಪೀಠ ಹೇಳಿದೆ.


ಸಾರ್ವಜನಿಕ ಹಿತದೃಷ್ಟಿಯಿಂದ ನ್ಯಾಯಾಲಯದ ಮುಂದಿರುವ ದಾಖಲೆಗಳನ್ನು ಆಧರಿಸಿ ಈ ಮಾರ್ಗದರ್ಶಿ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಇದನ್ನು ಜಾರಿಗೊಳಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.

Ads on article

Advertise in articles 1

advertising articles 2

Advertise under the article