ಡಿಜಿಟಲ್ ಮೀಡಿಯಾಕ್ಕೆ ನಿಯಂತ್ರಣ: ಮಾಧ್ಯಮ ನೋಂದಣಿ ಮಸೂದೆಗೆ ಶೀಘ್ರದಲ್ಲೇ ತಿದ್ದುಪಡಿ

ನಿಯಂತ್ರಣ ಇಲ್ಲದ ಡಿಜಿಟಲ್ ಮೀಡಿಯಾಕ್ಕೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆ 2019ಕ್ಕೆ ತಿದ್ದುಪಡಿ ಮಾಡಿ ಅದರ ವ್ಯಾಪ್ತಿಗೆ ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ತರುವ ಪ್ರಕ್ರಿಯೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಆರಂಭಿಸಿದೆ.
ಮೀಡಿಯಾ ಮತ್ತು ಪ್ರಿಂಟ್ ಮೀಡಿಯಾ (ದೃಶ್ಯ ಮತ್ತು ಮುದ್ರಣ ಮಾಧ್ಯಮ) ನಿಯಂತ್ರಣ ಹೊಂದಿರುವ ಬ್ರಿಟಿಷರ ಕಾಲದ ಮಾಧ್ಯಮ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆಯನ್ನೇ ಪ್ರಸಕ್ತ ಮಸೂದೆಗೆ ತಿದ್ದುಪಡಿ ತರುವ ಪ್ರಯತ್ನ ಭರದಿಂದ ಸಾಗಿದೆ. ಡಿಜಿಟಲ್ ಸುದ್ದಿ ಮಾಧ್ಯಮದ ನಿಯಂತ್ರಣಕ್ಕೆ ನಡೆದ ಮೊದಲ ಕ್ರಮ ಇದಾಗಿದೆ.
ಈ ಪ್ರಸ್ತಾಪಿತ ಮಸೂದೆಗೆ ಪ್ರಧಾನಿ ಕಾರ್ಯಾಲಯ ಮತ್ತು ಇತರೆ ಸಂಬಂಧಿತ ಇಲಾಖೆಗಳಿಂದ ಅನುಮತಿ ದೊರೆಯಬೇಕಿದೆ. ಕಾನೂನು ಅಸ್ತಿತ್ವಕ್ಕೆ ಬಂದ 90 ದಿನಗಳಲ್ಲಿ ಡಿಜಿಟಲ್ ಸುದ್ದಿ ಪ್ರಸಾರಕರು ನೋಂದಣಿಗೆ ಅರ್ಜಿ ಸಲ್ಲಿಸಬೇಕು.
ನಿಯಮ ಉಲ್ಲಂಘಿಸಿದ ಮಾಧ್ಯಮದ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಮಾಧ್ಯಮ ರಿಜಿಸ್ಟ್ರಾರ್ ಜನರಲ್ ಅವರಿಗೆ ಇದೆ. ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬೇಕಿದೆ. ಅಗತ್ಯ ಕಂಡುಬಂದರೆ, ನೋಂದಣಿ ರದ್ದುಪಡಿಸಿ, ದಂಡ ವಿಧಿಸುವ ಅಧಿಕಾರವೂ ರಿಜಿಸ್ಟ್ರಾರ್ ಅವರಿಗಿದೆ.
ಇದರ ಜೊತೆಗೆ, ಭಾರತೀಯ ಪತ್ರಿಕಾ ಮಂಡಳಿಯ ಮುಖ್ಯಸ್ಥರ ನೇತೃತ್ವದಲ್ಲಿ ದೂರುಗಳ ತೀರ್ಮಾನಕ್ಕೆ ಮೇಲ್ಮನವಿ ಮಂಡಳಿಯನ್ನು ರಚಿಸಲಾಗುತ್ತದೆ. ಜುಲೈ 18ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗ ಪ್ರಸ್ತಾವಿತ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ.