ವಕೀಲರಿಗೆ ಆರೋಗ್ಯ ವಿಮೆ: ವಕೀಲರ ಸಂಘದ ಮೂಲಧನ ಸ್ಥಾಪನೆಗೆ 50 ಕೋಟಿ ರೂ. ಅನುದಾನ
ವಕೀಲರಿಗೆ ಆರೋಗ್ಯ ವಿಮೆ: ವಕೀಲರ ಸಂಘದ ಮೂಲಧನ ಸ್ಥಾಪನೆಗೆ 50 ಕೋಟಿ ರೂ. ಅನುದಾನ
ವಕೀಲರಿಗೂ ಆರೋಗ್ಯ ಭದ್ರತೆ ಬೇಕು, ವಕೀಲರಿಗೆ, ಅವರ ಕುಟುಂಬಕ್ಕೆ ಆರೋಗ್ಯ ಬೇಕು ಎಂಬುದು ವಕೀಲರ ಬಹುಕಾಲದ ಬೇಡಿಕೆ. ಈ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸ್ಥಾಪಿಸಲು ಉದ್ದೇಶಿಸಿರುವ ಆರೋಗ್ಯ ವಿಮೆ ಮೂಲ ನಿಧಿಗೆ ಕರ್ನಾಟಕ ಸರ್ಕಾರ ಒತ್ತಾಸೆಯಾಗಿ ನಿಂತಿದೆ.
ವಕೀಲರ ಸಮುದಾಯದ ಹಲವು ವರ್ಷಗಳ ಬೇಡಿಕೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಕೀಲರ ಸಮುದಾಯಕ್ಕೆ ಆರೋಗ್ಯ ವಿಮೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮವನ್ನು ರೂಪಿಸಲು ಅನುವಾಗುವಂತೆ ಮೂಲ ನಿಧಿ (Corpus fund) ಸ್ಥಾಪಿಸಲು ರಾಜ್ಯ ಸರ್ಕಾರದ ವತಿಯಿಂದ ಈ ನೆರವು ನೀಡಲಾಗಿದೆ ಎಂದು ರಾಜ್ಯ ಸರ್ಕಾರ ನಡವಳಿಯಲ್ಲಿ ಹೇಳಲಾಗಿದೆ.
ಈ ಮೂಲ ನಿಧಿ ಒಂದು ಬಾರಿಯ ಅನುದಾನವಾಗಿರುತ್ತದೆ. ಉಳಿಕೆ ಶೇ. 50ರಷ್ಟು ಮೊತ್ತವನ್ನು ವಕೀಲ ಸಂಘ ತಮ್ಮ ವಕೀಲರುಗಳ ಕೊಡುಗೆಯಿಂದ ಸಂಗ್ರಹಿಸಬೇಕು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಈ ಮೂಲ ನಿಧಿಯನ್ನು ನಿರ್ವಹಿಸಲಿದೆ.
ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ನೀತಿಯನ್ನು ರೂಪಿಸಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲೇ ಈ ಆರೋಗ್ಯ ವಿಮೆ ಜಾರಿಯಾಗಲಿದ್ದು, ಇದರ ಲಾಭ ಎಲ್ಲ ವಕೀಲರು ಮತ್ತು ಅವರ ಕುಟುಂಬಕ್ಕೆ ಲಭ್ಯವಾಗಲಿದೆ.
ಆದರೆ, ಪೂರ್ಣ ಮೊತ್ತವಾದ ರೂ. 100 ಕೋಟಿ ರೂ.ಗಳನ್ನು ಸರ್ಕಾರವೇ ನೀಡಬೇಕು ಎಂದು ವಕೀಲರ ಸಮುದಾಯದ ಆಗ್ರಹವಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: Law/Lad/150/2022 Dated 24-06-2022