ಜನನ ಮರಣ ನೋಂದಣಿ: ಭ್ರಷ್ಟತೆಗೆ ಮತ್ತಷ್ಟು ಸೊಪ್ಪು ಹಾಕುವ ಅಧಿಸೂಚನೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ
ಜನನ ಮರಣ ನೋಂದಣಿ: ಭ್ರಷ್ಟತೆಗೆ ಮತ್ತಷ್ಟು ಸೊಪ್ಪು ಹಾಕುವ ಅಧಿಸೂಚನೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ
ಕರ್ನಾಟಕ ಸರ್ಕಾರ ದಿನಾಂಕ 18-07-2022ರಂದು ಹೊರಡಿಸಿರುವ ಬಗ್ಗೆ ಮಹತ್ವದ ಅಧಿಸೂಚನೆಗೆ ವಕೀಲ ಸಮುದಾಯ, ನ್ಯಾಯಾಂಗ ಇಲಾಖೆ ಸೇರಿದಂತೆ ಜನಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈಗಾಗಲೇ ಭ್ರಷ್ಟಾಚಾರದ ಅಡ್ಡೆಯಾಗಿರುವ ಕಂದಾಯ ಇಲಾಖೆಗೆ ಜನನ ಮತ್ತು ಮರಣ ನೋಂದಣಿ ತಿದ್ದುಪಡಿಯ ಕಾರ್ಯವ್ಯಾಪ್ತಿಯನ್ನು ವಹಿಸಿರುವುದು ಅಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮತ್ತಷ್ಟು ಭ್ರಷ್ಟಾಚಾರ ನಡೆಸಲು ಕುಮ್ಮಕ್ಕು ನೀಡಿದಂತಾಗಿದೆ.
40% ಕಮಿಷನ್ ಆರೋಪ ಕೇಳಿಬಂದ ನಂತರವಂತೂ ರಾಜ್ಯದ ಕಂದಾಯ ಇಲಾಖೆಯಿಂದ ಹಿಡಿದು ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಜವಾನನಿಂದ ಹಿಡಿದು ಉನ್ನತ ಅಧಿಕಾರಿ ವರಗೆ ಲಂಚಕ್ಕೆ ಬಿಂದಾಸ್ ಅಗಿ ಕೈ ಚಾಚುತ್ತಿದ್ದಾರೆ. ಇದಕ್ಕೆ ಒಂದಷ್ಟು ಅಧಿಕಾರಿಗಳು, ನೌಕರರು ಮಾತ್ರ ಅಪವಾದ..
ಮತ್ತು ಇದೇನೂ ಗುಟ್ಟಾಗಿ ಉಳಿದಿಲ್ಲ. ಜನಸಾಮಾನ್ಯರು ಈ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ.
ಇದೆ ವೇಳೆ, ಶೇ. 100ರಷ್ಟು ಭ್ರಷ್ಟಾಚಾರ ರಹಿತ ಹಾಗೂ ಪರಿಶುದ್ಧತೆಯನ್ನು ಹೊಂದಿರುವ ನ್ಯಾಯಾಂಗ ಇಲಾಖೆಯಿಂದ ಕಾರ್ಯವ್ಯಾಪ್ತಿಯನ್ನು ಹಿಂದಕ್ಕೆ ಪಡೆದು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಿರುವುದು ಅಧಿಕಾರಿಗಳಿಗೆ ಮತ್ತಷ್ಟು ಮೇಯಲು ಸರ್ಕಾರ ಅವಕಾಶ ನೀಡಿದಂತಾಗುತ್ತದೆ.
ವಕೀಲರ ಸಮುದಾಯ ಈಗಾಗಲೇ ಮಾನ್ಯ ಸರ್ಕಾರದ ಅಧಿಸೂಚನೆಯ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದು, ವ್ಯಾಪಕ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರದ ಅಧಿಸೂಚನೆ: - No. PDS 66 SSM 2022-- Dated: 18-07-2022.
ದಿನಾಂಕ 18-07-2022ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಈ ಹಿಂದೆ ಇದ್ದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜೆಎಂಎಫ್‌ಸಿ) ನ್ಯಾಯಾಲಯದ ಕಾರ್ಯವ್ಯಾಪ್ತಿಯನ್ನು ಬದಲಾಯಿಸಿ ಆ ಅಧಿಕಾರವನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್)ಕ್ಕೆ ನೀಡಿತ್ತು.
ಸದ್ರಿ ನಿಯಮದ ಕಲಂ 30 ಉಪ ಕಲಂ 1ರ ಅಡಿಯಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಈ ತಿದ್ದುಪಡಿ ಮಾಡಲಾಗಿದೆ. ಹಾಗೂ ನಿಯಮವನ್ನು ಇನ್ನು ಮುಂದೆ ಕರ್ನಾಟಕ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ನಿಯಮ-2022 ಎಂದು ಬದಲಾಯಿಸಲಾಗಿತ್ತು.
ಇದನ್ನೂ ಓದಿ:-
ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್ ವ್ಯಾಪ್ತಿಗೆ