-->
ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ

ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ

ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ





ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾಯಿಸಲಾಗಿದೆ. ಕರ್ನಾಟಕ ಸರ್ಕಾರ ಈ ಬಗ್ಗೆ ಮಹತ್ವದ ಅಧಿಸೂಚನೆ ಪ್ರಕಟಿಸಿದೆ. 


ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಈ ಹಿಂದೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜೆಎಂಎಫ್‌ಸಿ) ನ್ಯಾಯಾಲಯದ ವ್ಯಾಪ್ತಿಗೆ ಇತ್ತು. ಅದಕ್ಕೆ ಬದಲಾಗಿ ಇನ್ನು ಮುಂದೆ ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್‌)ಕ್ಕೆ ಪ್ರಕರಣಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ನೀಡಲಾಗಿದೆ.



ರಾಜ್ಯ ಸರ್ಕಾರ ಈ ಬಗ್ಗೆ ದಿನಾಂಕ 18-07-2022ರಂದು ಮಹತ್ವದ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ದಾವೆಯ ಕಾರ್ಯವ್ಯಾಪ್ತಿಯನ್ನು ಬದಲಾಯಿಸಲಾಗಿದೆ.



ಈ ಹಿಂದೆ ಜನನ ಅಥವಾ ಮರಣ ವಹಿಯಲ್ಲಿ ತಡ ನೋಂದಣಿ ಕುರಿತ ಯಾವುದೇ ವಿವಾದಗಳನ್ನು ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಗೆಹರಿಸಬಹುದಿತ್ತು.

ಅದರೆ, ಇನ್ನು ಮುಂದೆ ಇದನ್ನು ಮಾನ್ಯ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲೇ ಬಗೆಹರಿಸಬೇಕಾಗಿದೆ.


ಅಧಿಸೂಚನೆಯ ವಿವರ

ಕರ್ನಾಟಕ ಸರ್ಕಾರದ ಅಧಿಸೂಚನೆ: No. PDS 66 SSM 2022 Dated: 18-07-2022



ನಿಯಮದ ಕಲಮು 30 ಉಪ ಕಲಮು 1ರ ಅಡಿಯಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಈ ತಿದ್ದುಪಡಿ ಮಾಡಲಾಗಿದ್ದು, ನಿಯಮವನ್ನು ಇನ್ನು ಮುಂದೆ ಕರ್ನಾಟಕ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ನಿಯಮ-2022 ಎಂದು ಬದಲಾಯಿಸಲಾಗಿದೆ.

Ads on article

Advertise in articles 1

advertising articles 2

Advertise under the article