ಚೆಕ್ ಪಾವತಿಯಲ್ಲಿ ದೊಡ್ಡ ಬದಲಾವಣೆ: ಆಗಸ್ಟ್ 1ರಿಂದ ಬ್ಯಾಂಕ್ ಆಫ್ ಬರೋಡಾ ಜಾರಿ
ಚೆಕ್ ಪಾವತಿಯಲ್ಲಿ ದೊಡ್ಡ ಬದಲಾವಣೆ: ಆಗಸ್ಟ್ 1ರಿಂದ ಬ್ಯಾಂಕ್ ಆಫ್ ಬರೋಡಾ ಜಾರಿ
ಚೆಕ್ ಮೂಲಕ ಹಣ ಪಾವತಿ ನಿಯಮದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಬ್ಯಾಂಕ್ ಆಫ್ ಬರೋಡಾ ನಿರ್ಧರಿಸಿದೆ. ಆಗಸ್ಟ್ 1 ರಿಂದ ಚೆಕ್ ಪಾವತಿಗೆ ಹೊಸ ನಿಯಮಗಳು ಜಾರಿಗೆ ಬರಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಪ್ರಕಾರ ಈ ನಿಯಮಗಳು ಜಾರಿಗೆ ಬರಲಿವೆ.
ರಾಷ್ಟ್ರೀಕೃತ ಬ್ಯಾಂಕ್ ಅಗಿರುವ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಆಗಸ್ಟ್ 1 ರಿಂದ ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದೆ. 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ ಗ್ರಾಹಕರಿಗೆ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಬ್ಯಾಂಕ್ ಕಡ್ಡಾಯಗೊಳಿಸಿದೆ.
ಚೆಕ್‌ಗಳ ಕ್ಲಿಯರೆನ್ಸ್ ಕುರಿತು RBI ಮಾರ್ಗಸೂಚಿ ಹೊರಡಿಸಿದ್ದು, ಅದನ್ನು ಬ್ಯಾಂಕ್ ಅನುಸರಿಸಲಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಚೆಕ್ ಪಾವತಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಆಗಸ್ಟ್ 1 ರಿಂದ ತನ್ನ ಗ್ರಾಹಕರಿಗೆ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಪಾವತಿಸಲು ಧನಾತ್ಮಕ ಪಾವತಿ (BOB Positive Payment System) ವ್ಯವಸ್ಥೆಯು ಕಡ್ಡಾಯವಾಗಿದೆ. ಈ ವ್ಯವಸ್ಥೆ ಇಲ್ಲದಿದ್ದರೆ ಚೆಕ್ ಪಾವತಿ ತಡೆಯಬಹುದಾಗಿದೆ.
'ಬ್ಯಾಂಕಿಂಗ್ ಭದ್ರತೆಗೆ ನಾವು ಬದ್ಧರಾಗಿದ್ದೇವೆ' ಎಂದು ಬ್ಯಾಂಕ್ ಆಫ್ ಬರೋಡಾ ಟ್ವೀಟ್ ಮಾಡಿದೆ. PSS ಪಾವತಿ ನಿಯಮದಲ್ಲಿ ಚೆಕ್ ವಂಚನೆಯಿಂದ ನಾವು ನಿಮ್ಮನ್ನು ರಕ್ಷಿಸುತ್ತೇವೆ. ಆಗಸ್ಟ್ 1, 2022 ರಿಂದ ಜಾರಿಗೆ ಬರುವಂತೆ, 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ PSS ಕಡ್ಡಾಯ ಎಂದು ಬ್ಯಾಂಕ್ ತನ್ನ ಟ್ವೀಟ್‌ನಲ್ಲಿ ಹೇಳಿದೆ.
ಧನಾತ್ಮಕ ವೇತನ ವ್ಯವಸ್ಥೆ (PSS ) ಎಂದರೇನು?
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) PPS ನಿಯಮದ ಉಸ್ತುವಾರಿ ವಹಿಸಿದೆ. ಈ ನಿಯಮದ ಪ್ರಕಾರ, ದೊಡ್ಡ ಮೌಲ್ಯದ ಮುಖಬೆಲೆಯ ಚೆಕ್ ಅನ್ನು ನೀಡುವ ಗ್ರಾಹಕರು ಚೆಕ್ ಸಂಖ್ಯೆ, ಚೆಕ್ ಮೊತ್ತ, ದಿನಾಂಕ ಮತ್ತು ಫಲಾನುಭವಿಯ ಹೆಸರಿನಂತಹ ಕೆಲವು ಅಗತ್ಯ ವಿವರಗಳನ್ನು ಶೇರ್ ಮಾಡಬೇಕಾಗುತ್ತದೆ. ಆ ಚೆಕ್ ಪಾವತಿ ವೇಳೆ, ಅದನ್ನು ಕ್ರಾಸ್-ಚೆಕ್ ಮಾಡಲಾಗುತ್ತದೆ.
ಮಾಹಿತಿ ದೋಷ ಇದ್ದರೆ ಚೆಕ್ ತಿರಸ್ಕೃತ!
ಚೆಕ್ ನೀಡುವವರು SMS, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ATM ನಂತಹ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅಗತ್ಯ ವಿವರಗಳನ್ನು ಒದಗಿಸಬಹುದು. ಬಳಿಕ, ಚೆಕ್ ಪಾವತಿಗೆ ಮೊದಲು ಈ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಮಾಹಿತಿಯಲ್ಲಿ ಅಲ್ಪ ವ್ಯತ್ಯಾಸ ಕಂಡು ಬಂದರೂ ಚೆಕ್ ತಿರಸ್ಕೃತವಾಗುತ್ತದೆ.
ಚೆಕ್ ಕಡಿತಗೊಂಡ ಬ್ಯಾಂಕ್ ಮತ್ತು ಚೆಕ್ ಜಮೆ ಮಾಡುವ ಬ್ಯಾಂಕ್, ಎರಡಕ್ಕೂ ಮಾಹಿತಿ ಗೊತ್ತಿರಲೇಬೇಕು.
ಆರ್‌ಬಿಐ ಮಾರ್ಗಸೂಚಿಗಳೇನು?
50,000 ಮತ್ತು ಅದಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ PPS ಸೌಲಭ್ಯ ಒದಗಿಸಲು RBI ಮಾರ್ಗಸೂಚಿ ಹೊರಡಿಸಿದೆ. 5 ಲಕ್ಷಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ ಇದನ್ನು ಕಡ್ಡಾಯಗೊಳಿಸುವುದನ್ನು ಪರಿಗಣಿಸಲು ಅದು ಸೂಚಿಸಿತ್ತು.