-->
ಒಳ ಉಡುಪು ತೆಗೆಸಿ NEET ಪರೀಕ್ಷೆ ಬರೆಸಿದ ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ

ಒಳ ಉಡುಪು ತೆಗೆಸಿ NEET ಪರೀಕ್ಷೆ ಬರೆಸಿದ ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ

ಒಳ ಉಡುಪು ತೆಗೆಸಿ NEET ಪರೀಕ್ಷೆ ಬರೆಸಿದ ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ





2022ಜುಲೈ 17ರಂದು ನಡೆದ NEET ಪರೀಕ್ಷೆ ದೇಶಾದ್ಯಂತ ಸುದ್ದಿಯಾಗಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಬಳಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ದಾಖಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಪರಿಹಾರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.


ಬಲವಂತವಾಗಿ ಒಳ ಉಡುಪು ತೆಗೆಸಿರುವುದರಿಂದ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗಿದ್ದಾರೆ.

ಮುಜುಗರ ಮತ್ತು ಘಟನೆಯಿಂದ ಹಿಂಸೆ ಅನುಭವಿಸಿದ ವಿದ್ಯಾರ್ಥಿನಿಯರು ಸಮರ್ಪಕವಾಗಿ ಪರೀಕ್ಷೆ ಬರೆಯಲಾಗಿಲ್ಲ. ಹಾಗಾಗಿ, ಮರು ಪರೀಕ್ಷೆ ನಡೆಸಲು ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


ಪರೀಕ್ಷೆಯಲ್ಲಿ ನಡೆಯುವ ಸಂಭಾವ್ಯ ಅಕ್ರಮಗಳನ್ನು ತಡೆಯಲು ಸಾಕಷ್ಟು ವಿಧಾನಗಳಿವೆ. CCTV ಅಳವಡಿಸಿಯೂ ಮೇಲ್ವಿಚಾರಣೆ ಮಾಡಬಹುದು. ಅದನ್ನು ಬಿಟ್ಟು, ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆ, ವಿದ್ಯಾರ್ಥಿನಿಯರನ್ನು ಅಪಮಾನಿಸಿದ್ದಾರೆ. ಘಟನೆಯಿಂದ ಸಂತ್ರಸ್ತರು ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅದಕ್ಕೆ ಸೂಕ್ತ ಪರಿಹಾರ ನೀಡುವಂತೆ ಘನ ನ್ಯಾಯಾಲಯ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.


ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ರಾಜ್ಯದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

Ads on article

Advertise in articles 1

advertising articles 2

Advertise under the article