Guest Column- ನಿಮಗಿದು ಗೊತ್ತೇ..?: ನಿಗಮ, ಮಂಡಳಿಯ ನೌಕರರು ಸರ್ಕಾರಿ ನೌಕರರಲ್ಲ..
ನಿಮಗಿದು ಗೊತ್ತೇ..?: ನಿಗಮ, ಮಂಡಳಿಯ ನೌಕರರು ಸರ್ಕಾರಿ ನೌಕರರಲ್ಲ..
20ನೇ ಶತಮಾನದ ಆಡಳಿತಾತ್ಮಕ ಸಂಘಟನೆಯ ಅತ್ಯುತ್ತಮ ಸಾಧನ ಸಾರ್ವಜನಿಕ ನಿಗಮ ಪರಿಕಲ್ಪನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರವು ಹಲವಾರು ನಿಗಮಗಳ ಮೂಲಕ ರಾಷ್ಟ್ರದ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ನಿಗಮದ ಮುಖ್ಯ ಲಕ್ಷಣ, ಹಲವರು ಸೇರಿ ಒಬ್ಬ ವ್ಯಕ್ತಿಯಂತೆ ಕೆಲಸ ಮಾಡುವುದೇ ಆಗಿದೆ.
ನಿರ್ದಿಷ್ಟವಾದ ಕೆಲವು ಚಟುವಟಿಕೆ ಮತ್ತು ಕಾರ್ಯಗಳಿಗಾಗಿ ನಿಗಮಗಳನ್ನು ಸ್ಥಾಪಿಸಲಾಗಿರುತ್ತದೆ. ಶಾಸನದ ಮೂಲಕ ಸ್ಥಾಪಿತವಾಗಿರುತ್ತವೆ. ಸಾರ್ವಜನಿಕ ಹಿತ ಸಾಧನೆಗಾಗಿ ಸ್ಥಾಪಿತವಾದ ಈ ಸಂಸ್ಥೆಗಳು ಹಣಕಾಸಿನ ದೃಷ್ಟಿಯಿಂದ ಸ್ವತಂತ್ರವಾಗಿರುತ್ತವೆ. 20ನೆಯ ಶತಮಾನದಲ್ಲಾದ ಯುದ್ಧಗಳು ಹಾಗೂ ತೀವ್ರ ಆರ್ಥಿಕ ಮುಗ್ಗಟನ್ನು ಸಮರ್ಥವಾಗಿ ಎದುರಿಸಲು ಇವುಗಳು ನೆರವಾದವು.
ಸರಕಾರಕ್ಕೂ ನಿಗಮಗಳಿಗೂ ಯಾವುದೇ ರೀತಿಯ ವಿವಾದ ಉಂಟಾದರೆ ಸರಕಾರದ ನಿರ್ಣಯವೇ ಅಂತಿಮವಾಗಿರುತ್ತದೆ. ನಿಗಮಗಳು ಆಡಳಿತದಲ್ಲಿ ಸ್ವಾತಂತ್ರ್ಯ ಪಡೆದಿರುತ್ತವೆ. ಅದರ ಆಡಳಿತದಲ್ಲಿ ಕೆಲವು ವಿಶಿಷ್ಟ ಸೂಚನೆಗಳನ್ನು ಸರಕಾರ ನೀಡಬಹುದು. ಸಾರ್ವಜನಿಕ ನಿಗಮದ ಮುಖ್ಯಸ್ಥ ಸರಕಾರಿ ಉನ್ನತ ಅಧಿಕಾರಿಯಾಗಿ ಇರಬೇಕೆಂಬ ನಿಯಮವಿಲ್ಲ.
ನಿಗಮಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸ್ವಾತಂತ್ಯ ಇರುತ್ತದೆ. ಅಗತ್ಯವಿದ್ದ ಸಿಬ್ಬಂದಿ ವರ್ಗಕ್ಕೆ ಪ್ರೋತ್ಸಾಹ ನೀಡಿ, ಅನಗತ್ಯ ಸಿಬ್ಬಂದಿಯನ್ನು ಸೇವೆಯಿಂದ ರದ್ದುಪಡಿಸಲೂಬಹುದು.
ನಮ್ಮ ಸಮಾಜದಲ್ಲಿ ಬರೋಬ್ಬರಿ 76 ಮಂಡಳಿ ಮತ್ತು ನಿಗಮಗಳಿವೆ. ಅದರಲ್ಲಿ ಸಾರಿಗೆ ಸಂಸ್ಥೆಯೂ ಕೂಡಾ ಒಂದು, ಇವರ ಕೆಲವೊಂದಷ್ಟು ಸಮಸ್ಯೆಗಳನ್ನು ಬಗೆಹರಿಸಬಹುದಷ್ಟೇ, ಎಲ್ಲಾ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡಿದರೆ ಉಳಿದ 75 ನಿಗಮಗಳ ನೌಕರರು ಕೂಡಾ ಅದೇ ಬೇಡಿಕೆಯನ್ನು ಮುಂದಿಡಬಹುದು.
-'ಮಂಡಳಿಗಳು ಮತ್ತು ನಿಗಮಗಳ ಪಟ್ಟಿ ಇಲ್ಲಿದೆ...
-'ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿ.
-'ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
-'ಮೈಸೂರು ಮಿನರಲ್ಸ್ ಲಿಮಿಟೆಡ್
-'ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ- ಬೆಸ್ಕಾಂ
-'ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ- ಹೆಸ್ಕಾಂ
-'ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ
-'ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ- ಮೆಸ್ಕಾಂ
-'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - ಬಿಎಂಟಿಸಿ
-'ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್
-'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ- ಕೆಎಸ್‌ಆರ್‌ಟಿಸಿ
-'ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ
-'ಮೈಸೂರು ಸೇಲ್ಸ್ ಇಂಟರ್-ನ್ಯಾಷನಲ್ ಲಿಮಿಟೆಡ್ -ಎಂಎಸ್‌ಐಎಲ್
-'ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ -
-'ಕರ್ನಾಟಕ ನೀರಾವರಿ ನಿಗಮ ನಿಯಮಿತ
-'ಕರ್ನಾಟಕ ರೂರಲ್ ಇನ್-ಫ್ರಾಸ್ಟ್ರಕ್ಚರ್ ಅಭಿವೃದ್ಧಿ ನಿಗಮ
-'ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ
-'ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
-'ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
-'ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
-'ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ
-'ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ
-'ಡಾ.. ಡಿ.. ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
-'ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ
-''ಕರ್ನಾಟಕ ಮಹರ್ಷಿ ವಾಲ್ಮಿಕಿ ಪ. ಪಂಗಡಗಳ ಅಭಿವೃದ್ಧಿ ನಿ.'
-'ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ರಾಜ್ಯ ಉಗ್ರಾಣ ನಿಗಮ
-'ಕರ್ನಾಟಕ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲ-ಸೌಕರ್ಯ ಅಭಿವೃದ್ಧಿ ನಿಗಮ
-'ಮೈಸೂರು ಕಾಗದ ಕಾರ್ಖಾನೆ ನಿಯಮಿತ
-'ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
-'ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ
-'ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
-'ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
-'ಕರ್ನಾಟಕ ರಾಜ್ಯ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮ
-'ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
-'ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ
-'ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
-'ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ
-'ಕಾರ್ಮಿಕರ ರಾಜ್ಯ ವಿಮಾ ನಿಗಮ ಕರ್ನಾಟಕ
-'ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ
-'ಕರ್ನಾಟಕ ರಾಜ್ಯ ಕಟ್ಟಡ ಕೇಂದ್ರ (KARNIK)
-'ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
-'ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ
-'ದಕ್ಷಿಣ ಪ್ರಾದೇಶಿಕ ವಿದ್ಯುತ್ ಮಂಡಳಿ
-'ರೋರಿಕ್ ಮತ್ತು ದೇವಿಕಾ ರಾಣಿ ರೋರಿಕ್ ಎಸ್ಟೇಟ್ ಮಂಡಳಿ
-'ಕರ್ನಾಟಕ ರಾಜ್ಯ ಕರಾವಳಿ ಪ್ರದೇಶ ನಿರ್ವಹಣಾ ಮಂಡಳಿ
-'ಕೇಂದ್ರ ಪರಿಹಾರ ಸಮಿತಿ
-'ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿ
-''ಕರ್ನಾಟಕ ರಾಜ್ಯ ಮಾವು ಅಬಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ'
-'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
-'ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
-'ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
-'ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ
-'ಡಾ . ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
-'ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
-'ಎನ್.ಜಿ.ಎ.ಎಫ್ (ಹುಬ್ಬಳ್ಳಿ)
-'ಮೈಸೂರು ಸಕ್ಕರೆ ಕಂಪನಿ ನಿ.
-'ಶ್ರಿ ಕಂಠೀರವ ಸ್ಟುಡಿಯೋಸ್ ಲಿ.
-'ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿ.
-'ಕರ್ನಾಟಕ ರಾಜ್ಯ ಕೃಷ್ಯುತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿ.'
-'ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿ.
-'ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ(ನಿ)
-'ಮಾರ್ಕೆಂಟಿಗ್ ಕನ್ಸಲ್-ಟೆಂಟ್ಸ್ ಮತ್ತು ಎಜ್ಸೆನ್ಸೀಸ್ ಲಿ.
-'ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಲ್ ಲಿ.
-'ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿ.
-'ಹಟ್ಟಿ ಚಿನ್ನದ ಗಣಿ ಕಂಪನಿ ನಿ.
-'ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ
-'ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆ
-'ಮಾರ್ಕೆಟಿಂಗ್ ಕನ್ಸಲ್ಟೆಂಟ್ಸ್ ಮತ್ತು ಏಜನ್ಸೀಸ್
-'ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್
-'ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ
-'ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ
ಲೇಖನ: ಶಿವರಾಜ್ ಮೋತಿ