ಕರ್ನಾಟಕ ಉದ್ಯೋಗ ನೀತಿ 2022-2025: ಕನ್ನಡಿಗರಿಗೆ ಖಾಸಗಿ ಕಂಪೆನಿಗಳಲ್ಲಿ ಕಡ್ಡಾಯ ಉದ್ಯೋಗ !
ಕರ್ನಾಟಕ ಉದ್ಯೋಗ ನೀತಿ 2022-2025: ಕನ್ನಡಿಗರಿಗೆ ಖಾಸಗಿ ಕಂಪೆನಿಗಳಲ್ಲಿ ಕಡ್ಡಾಯ ಉದ್ಯೋಗ !
ಕರ್ನಾಟಕ ರಾಜ್ಯದಲ್ಲಿ ಇರುವ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಕರ್ನಾಟಕ ಉದ್ಯೋಗ ನೀತಿ 2022-2025ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಕಲ್ಪಿಸುವ ಈ ನೀತಿಯಿಂದ ಹೊಸ ನಿರೀಕ್ಷೆಗಳು ಗರಿಗೆದರಿದೆ.
'ಹೆಚ್ಚುವರಿ ಹೂಡಿಕೆ' ಮಾಡುವ ಕೈಗಾರಿಕಾ ಸಂಸ್ಥೆಗಳ ಆಧಾರದಲ್ಲಿ ಕನ್ನಡಿಗರಿಗೆ ಶೇ.2.5ರಿಂದ ಶೇ.3ರಷ್ಟುಉದ್ಯೋಗ ನೀಡುವ ನೀತಿ ಇದಾಗಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭ್ಯವಾಗಲಿದ್ದು, ರಾಜ್ಯದ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಕೈಗಾರಿಕೆಗಳಿಗೆ ಈ ಉದ್ಯೋಗ ನೀತಿ ಜಾರಿಯಾಗಲಿದೆ. ಇಂತಹ ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹವನ್ನೂ ಸರ್ಕಾರ ನೀಡಲಿದೆ.
ಎ, ಬಿ ಸೇರಿದಂತೆ ಎಲ್ಲಾ ಶ್ರೇಣಿಯಲ್ಲಿಯೂ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಲು ನೀತಿ ರೂಪಿಸಲಾಗಿದೆ. ರೂ. 25 ಕೋಟಿಗಿಂತ ಹೆಚ್ಚು 'ಹೆಚ್ಚುವರಿ ಬಂಡವಾಳ ಹೂಡಿಕೆ' ಮಾಡುವ ಮಧ್ಯಮ ಕೈಗಾರಿಕೆಗಳು ಶೇ. 20ರಿಂದ 25ರಷ್ಟು ಹೊಸ ಉದ್ಯೋಗ ಸೃಷ್ಟಿಸಬೇಕು. ಅದೇ ರೂ. 100 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿದರೆ, ಶೇ. 30-35ರಷ್ಟು ನೂತನ ಕೆಲಸ ಸೃಷ್ಟಿಸಬೇಕು.
ಕರ್ನಾಟಕ ಕೈಗಾರಿಕಾ ಪ್ರದೇಶಭಿವೃದ್ಧಿ ಮಂಡಳಿ (ಕೆಐಎಡಿಬಿ) ಈ ನೂತನ ಉದ್ಯೋಗ ನೀತಿಯನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲಿದೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ಇರಾದೆ ಇದೆ. ನಾಡಿನ ದುಡಿಯುವ ಕೈಗಳಿಗೆ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ಹಂತದ ಉದ್ಯೋಗ ಸಿಗುವ ನಿರೀಕ್ಷೆ ಹೆಚ್ಚಿದೆ.
ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ ದಿನದಿಂದ ಹೊಸ 'ಕರ್ನಾಟಕ ಉದ್ಯೋಗ ನೀತಿ 2022-2025' ಜಾರಿಗೆ ಬರಲಿದೆ.