-->
New Judges to Ktk HC - ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಐವರು ನೇಮಕಕ್ಕೆ ಕೊಲಿಜಿಯಂ ಶಿಫಾರಸು

New Judges to Ktk HC - ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಐವರು ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಕರ್ನಾಟಕ ಹೈಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಐವರು ನೇಮಕಕ್ಕೆ ಕೊಲಿಜಿಯಂ ಶಿಫಾರಸು





19-07-2022ರಂದು ನಡೆದ ಸುಪ್ರೀಂ ಕೋರ್ಟ್ ಕೊಲೀಜಿಯಂ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಐವರು ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ.



ಈ ನೂತನ ನ್ಯಾಯಮೂರ್ತಿಗಳ ಹೆಸರು ಈ ಕೆಳಗಿನಂತಿವೆ.


1. ಅನಿಲ್ ಭೀಮಸೇನ್ ಕಟ್ಟಿ


2. ಗುರುಸಿದ್ದಯ್ಯ ಬಸವರಾಜ


3. ಚಂದ್ರಶೇಖರ ಮೃತ್ಯುಂಜಯ ಜೋಷಿ


4. ಉಮೇಶ್ ಮಂಜುನಾಥ್ ಭಟ್ ಅಡಿಗ


5. ತಲಕಾಡ್ ಗಿರಿಗೌಡ ಶಿವಶಂಕರೇ ಗೌಡ



ಹಾಲಿ ರಾಜ್ಯ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇ ಗೌಡ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶ ಮಾನ್ಯ ಚಂದ್ರಶೇಖರ ಮೃತ್ಯುಂಜಯ ಜೋಶಿ, ಬೆಂಗಳೂರು ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅನಿಲ್‌ ಭೀಮಸೇನ ಕಟ್ಟಿ ಸಹಿತ ಐವರು ನ್ಯಾಯಮೂರ್ತಿಗಳನ್ನು ಮಾನ್ಯ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ.



'ಬೆಂಗಳೂರು ಕೌಟುಂಬಿಕ ನ್ಯಾಯಾಲಯ'ದ ಪ್ರಧಾನ ನ್ಯಾಯಾಧೀಶ ಗುರುಸಿದ್ದಯ್ಯ ಬಸವರಾಜ ಮತ್ತು ರಾಜ್ಯ ಕೈಗಾರಿಕಾ ಟ್ರಿಬ್ಯೂನಲ್ ಮೇಲುಸ್ತುವಾರಿ ಅಧಿಕಾರಿ ಹಾಗೂ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿಕಟಪೂರ್ವ ಪ್ರಧಾನ ನ್ಯಾಯಾಧೀಶ ಉಮೇಶ್‌ ಮಂಜುನಾಥ್‌ ಭಟ್‌ ಅಡಿಗ ಅವರೂ ಶಿಫಾರಸು ಮಾಡಲಾದ ಹೈಕೋರ್ಟ್‌ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಇದ್ದಾರೆ.



ಜುಲೈ 19ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಈ ಮೇಲಿನ ಶಿಫಾರಸ್ಸು ಮಾಡಿದೆ.


2022ರ ಮೇ 4ರಂದು ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿ ಚಂದ್ರಶೇಖರ ಮೃತ್ಯುಂಜಯ ಜೋಶಿ ಅವರು ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ ಅವರು ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿದ್ದರು.


ಅನಿಲ್‌ ಭೀಮಸೇನ ಕಟ್ಟಿ ಅವರು 2020ರ ಮೇ 11ರಿಂದ 2022ರ ಏಪ್ರಿಲ್‌ 30ರವರೆಗೆ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿದ್ದರು.



ನಿವೃತ್ತ ನ್ಯಾ. ಅನಿಲ್‌ ಭೀಮಸೇನ ಕಟ್ಟಿ ಅವರು ಸೇವೆಯಲ್ಲಿ ಇರುವಾಗಲೇ ಅವರ ಹೆಸರನ್ನು ಒಳಗೊಂಡ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಿಕೊಡಲಾಗಿತ್ತು. ಹೀಗಾಗಿ, ಅವರ ಹೆಸರನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆ. ಹುದ್ದೆಯಲ್ಲಿ ಇದ್ದಾಗ ಶಿಫಾರಸ್ಸು ಮಾಡಲಾಗಿದ್ದರೆ ನೇಮಕಾತಿಗೆ ಅವಕಾಶವಿದೆ.


ರಾಜ್ಯ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿವೆ. 2022ರ ಜುಲೈ 1ರಂತೆ 45 ನ್ಯಾಯಮೂರ್ತಿಗಳನ್ನು ಹೊಂದಿದೆ. ಸದ್ಯ 17 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇವೆ.

Ads on article

Advertise in articles 1

advertising articles 2

Advertise under the article