ಹೊಟೇಲ್ ಬಿಲ್‌ನಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಗೈಡ್‌ಲೈನ್ಸ್
ಹೊಟೇಲ್ ಬಿಲ್‌ನಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಗೈಡ್‌ಲೈನ್ಸ್
ಇನ್ಮುಂದೆ ಹೊಟೇಲ್ ಯಾ ರೆಸ್ಟೋರೆಂಟ್‌ಗಳಲ್ಲಿ ನೀಡುವ ಬಿಲ್‌ನಲ್ಲಿ ಸೇವಾ ಶುಲ್ಕ (ಸರ್ವಿಸ್ ಚಾರ್ಜ್ ವಿಧಿಸುವಂತಿಲ್ಲ. ರಾಷ್ಟೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಈ ಬಗ್ಗೆ ಮಾರ್ಗಸೂಚಿಯನ್ನು ನೀಡಿದೆ.
ಪ್ರಾಧಿಕಾರದ ಗೈಡ್‌ಲೈನ್ಸ್ ಏನು ಹೇಳುತ್ತದೆ...?
ಹೊಟೇಲ್ ಯಾ ರೆಸ್ಟೋ ಫುಡ್ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಯಾ ಮೊದಲೇ ಸರ್ವಿಸ್ ಚಾರ್ಜ್ ವಿಧಿಸುವಂತಿಲ್ಲ.
ಸೇವಾ ಶುಲ್ಕವನ್ನು ಇತರ ಹೆಡ್‌ನಲ್ಲೂ ಸಂಗ್ರಹಿಸುವಂತಿಲ್ಲ.
ಸೇವಾ ಶುಲ್ಕ ಪಾವತಿಸಬೇಕು ಎಂದು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಅದು ಗ್ರಾಹಕರ ಇಚ್ಚೆಗೆ ಬಿಟ್ಟದ್ದು. ಇಷ್ಟವಿದ್ದರೆ ಮಾತ್ರ ನೀಡಬಹುದು ಎಂದು ಗ್ರಾಹಕರಿಗೆ ಹೊಟೇಲ್/ರೆಸ್ಟೋರೆಂಟ್ ಆಡಳಿತ ಮಾಹಿತಿ ನೀಡಬೇಕು.
ಸರ್ವಿಸ್ ಚಾರ್ಜ್ ಸಂಗ್ರಹವನ್ನು ಆಧರಿಸಿ ಪ್ರವೇಶ ನಿರ್ಬಂಧಿಸುವಂತಿಲ್ಲ. ಸೇವೆಗಳನ್ನು ಆಧರಿಸಿ ಗ್ರಾಹಕರಿಗೆ ನಿಯಮವನ್ನು ಹೇರುವಂತಿಲ್ಲ.
ಫುಡ್ ಬಿಲ್ ಜೊತೆಗೆ ಸರ್ವಿಸ್ ಚಾರ್ಜ್ ಸೇರಿಸಿ ಒಟ್ಟು ಮೊತ್ತದ ಮೇಲೆ ಕರ (GST) ವಿಧಿಸುವಂತಿಲ್ಲ.
Unfair Trade Practice (ಅಕ್ರಮ ವ್ಯಾಪಾರ ಅಭ್ಯಾಸ) ಹಾಗೂ ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾದರೆ ಗ್ರಾಹಕರು ಪ್ರಾಧಿಕಾರದ ಗೈಡ್‌ಲೈನ್ಸ್ ಪ್ರಕಾರ ದೂರು ಸಲ್ಲಿಸಬಹುದು. ಇದಕ್ಕಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915ನ್ನು ಸಂಪರ್ಕಿಸಬಹುದು. ಇಲ್ಲವೇ ಈ ಕೆಳಗಿನ ಜಾಲತಾಣ ಮತ್ತು ಇಮೇಲ್ ಮೂಲಕ ಲಿಖಿತ ದೂರು ಸಲ್ಲಿಸಬಹುದು.
ಜಾಲತಾಣ: www.e-daakhil.nic.in.
ಪ್ರಾಧಿಕಾರದ ಇಮೇಲ್: com-ccpa@nic.in.
ಅಲ್ಲದೆ, ಈ ಬಗ್ಗೆ ಗ್ರಾಹಕರ ಆಯೋಗಕ್ಕೂ ದೂರು ಸಲ್ಲಿಸಬಹುದು.
ಫುಡ್ ಆರ್ಡರ್ ಮಾಡುವ ಮೊದಲೇ ಶುಲ್ಕ ?
ಎಪ್ರಿಲ್ 2017ರಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಮಾರ್ಗಸೂಚಿ ಹೊರಡಿಸಿತ್ತು. ಇದರ ಪ್ರಕಾರ, ಹೊಟೇಲ್ ಸ್ಟಾಫ್‌ಗೆ ಸೇವಾ ಶುಲ್ಕ ಪಾವತಿಸುವುದು ಮತ್ತು 'ಟಿಪ್ಸ್' ನೀಡುವುದು ಎಂಬುವುದು ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿತ್ತು.
ಆದರೆ, 2022ರಲ್ಲಿ ಗೈಡ್ಸ್‌ಲೈನ್ಸ್‌ನಲ್ಲಿ ಬದಲಾವಣೆ ಮಾಡಲಾಗಿತ್ತು. ಹೊಟೇಲ್ ಯಾ ರೆಸ್ಟೋಗಳು ಗ್ರಾಹಕರಿಂದ ಕಡ್ಡಾಯವಾಗಿ ಈ ಮೊತ್ತವನ್ನು ಸಂಗ್ರಹಿಸುವಂತಿಲ್ಲ. ತಮ್ಮ Menu ಕಾರ್ಡ್ ಬೆಲೆ ಹೊರತುಪಡಿಸಿ ಬೇರಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿತ್ತು.
ಗ್ರಾಹಕರ ಪ್ರವೇಶ ನಿರ್ಬಂಧ, ಆರ್ಡರ್ ಮಾಡುವ ಮುನ್ನವೇ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಗೈಡ್‌ಲೈನ್ಸ್ ಹೇಳಿತ್ತು.
ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಭಾರತೀಯ ರೆಸ್ಟೋರೆಂಟ್ ಒಕ್ಕೂಟ(NRAI)ಕ್ಕೆ ಒಂದು ಪತ್ರ ಬರೆದು, "ಸೇವಾ ಶುಲ್ಕವನ್ನು ಪಾವತಿಸಲು ಗ್ರಾಹಕರನ್ನು ಒತ್ತಾಯ ಮಾಡಲಾಗುತ್ತದೆ. ರೆಸ್ಟೋಗಳು ಮನಬಂದಂತೆ ಹೆಚ್ಚಿನ ದರವನ್ನು ವಿಧಿಸುತ್ತದೆ. ಅದು ನಿಯಮಬದ್ಧ ಎಂದು ಗ್ರಾಹಕರನ್ನು ನಂಬಿಸಿ ತಪ್ಪುದಾರಿಗೆ ಎಳೆಯುತ್ತಿದೆ" ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿ ಹೊರಡಿಸಲಾಗಿದೆ.