-->
 ಅಗಸ್ಟ್ 31ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜೆ: ಆಗಸ್ಟ್‌ 29ರ ಕಲಾಪಕ್ಕೆ ರಜೆ ನೀಡಿದ ಅಧಿಸೂಚನೆ

ಅಗಸ್ಟ್ 31ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜೆ: ಆಗಸ್ಟ್‌ 29ರ ಕಲಾಪಕ್ಕೆ ರಜೆ ನೀಡಿದ ಅಧಿಸೂಚನೆ

 ಅಗಸ್ಟ್ 31ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜೆ: ಆಗಸ್ಟ್‌ 29ರ ಕಲಾಪಕ್ಕೆ ರಜೆ ನೀಡಿದ ಅಧಿಸೂಚನೆ




ಆಗಸ್ಟ್‌ 29ರಂದು ಕರ್ನಾಟಕ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ರಜೆ ಘೋಷಿಸಲಾಗಿದೆ. ಇದರಿಂದ ಹೈಕೋರ್ಟ್‌ನ ಎಲ್ಲ ಪೀಠಗಳಿಗೆ ಆಗಸ್ಟ್‌ 31ರವರೆಗೆ ಸತತ ಐದು ದಿನ ರಜೆ ಸಿಕ್ಕಂತಾಗುತ್ತದೆ.



ಗೌರಿ ಗಣೇಶ ಮತ್ತು ಗಣೇಶ ಚತುರ್ಥಿ ಹಬ್ಬದ ಮುನ್ನಾ ದಿನವಾದ ಆಗಸ್ಟ್‌ 29ರಂದು ಹೈಕೋರ್ಟ್ ಅಧಿಕೃತ ರಜೆ ಘೋಷಿಸಿದೆ. ಈ ರಜೆಗೆ ಬದಲಾಗಿ, ಅಕ್ಟೋಬರ್‌ 15ರ ಶನಿವಾರ ಹೈಕೋರ್ಟ್‌ನ ಎಲ್ಲ ಪೀಠಗಳು ಕಾರ್ಯನಿರ್ವಹಿಸಲಿದೆ. ಇದರೊಂದಿಗೆ, ಹೈಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿಗೆ ಸತತ ಐದು ದಿನ ರಜೆ ಸಿಕ್ಕಂತಾಗಿದೆ.



ಆಗಸ್ಟ್ ತಿಂಗಳಲ್ಲಿ ಒಟ್ಟು 17 ದಿನ ಮಾತ್ರ ಕಲಾಪ ನಡೆದಂತಾಗುತ್ತದೆ. ಆಗಸ್ಟ್‌ 5ರಂದು ವರಮಹಾಲಕ್ಷ್ಮಿ ಹಬ್ಬ, 9ರಂದು ಮೊಹರಂ, 19ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಿರ್ಬಂಧಿತ ರಜೆ ಘೋಷಿಸಲಾಗಿತ್ತು. ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಸಹಿತ ಒಟ್ಟು 14 ದಿನ ರಜೆ ಸಿಕ್ಕಂತಾಗಿದೆ.



ಜಿಲ್ಲಾ ಕೋರ್ಟ್‌ಗಳಲ್ಲಿ ಒಂದೊಮ್ಮೆ ಸಂಬಂಧಿತ ಪ್ರಕರಣದಲ್ಲಿ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೂ ಪ್ರತಿಕೂಲ ಆದೇಶ ಮಾಡದಂತೆ ಹೈಕೋರ್ಟ್‌ ಸೂಚನೆ ನೀಡಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ತಿಳಿಸಿದರು.

Ads on article

Advertise in articles 1

advertising articles 2

Advertise under the article