-->
841 ಸರ್ಕಾರಿ ವಕೀಲರನ್ನು ವಜಾ ಗೊಳಿಸಿದ ಉ.ಪ್ರ. ಸರ್ಕಾರ: ಅದಕ್ಷತೆಗೆ ಸಂದ ಬೆಲೆ!?

841 ಸರ್ಕಾರಿ ವಕೀಲರನ್ನು ವಜಾ ಗೊಳಿಸಿದ ಉ.ಪ್ರ. ಸರ್ಕಾರ: ಅದಕ್ಷತೆಗೆ ಸಂದ ಬೆಲೆ!?

841 ಸರ್ಕಾರಿ ವಕೀಲರನ್ನು ವಜಾ ಗೊಳಿಸಿದ ಉ.ಪ್ರ. ಸರ್ಕಾರ: ಅದಕ್ಷತೆಗೆ ಸಂದ ಬೆಲೆ!?





ತಕ್ಷಣದಿಂದಲೇ ಜಾರಿಗೆ ಬರುವಂತೆ 841 ಸರ್ಕಾರಿ ವಕೀಲರಿಗೆ ಉತ್ತರ ಪ್ರದೇಶ ಸರ್ಕಾರ ಗೇಟ್‌ಪಾಸ್ ನೀಡಿದೆ. ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಸರ್ಕಾರ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಬಲ್ಲ ಮೂಲಗಳು ಹೇಳಿವೆ.



ಉತ್ತರಪ್ರದೇಶ ಸರ್ಕಾರ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್ ಅವರು ಈ ಆದೇಶ ಹೊರಡಿಸಿದ್ದಾರೆ. ಆದರೆ, ತನ್ನ ವಜಾ ಆದೇಶದಲ್ಲಿ ಸರ್ಕಾರ ವಕೀಲರ ವಜಾಕ್ಕೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.



ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠದ ಎಲ್ಲ ಸಾರ್ವಜನಿಕ ಅಭಿಯೋಜಕರು, 505 ಜನ ರಾಜ್ಯ ನ್ಯಾಯಾಂಗ ಅಧಿಕಾರಿಗಳು, ಲಖನೌ ಹೈಕೋರ್ಟ್ ಪೀಠದ 336 ಜನ ಸರ್ಕಾರಿ ವಕೀಲರನ್ನು ಸೇವೆಯಿಂದ ವಜಾ ಮಾಡಲಾಗಿದೆ.



ಅದರೊಂದಿಗೆ, ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿನೋದ್ ಕಾಂತ್ ಅವರನ್ನೂ ಸೇವೆಯಿಂದ ಮುಕ್ತಗೊಳಿಸಲಾಗಿದೆ.



ಅಷ್ಟೇ ಅಲ್ಲ, ಪ್ರಯಾರಾಜ್ ನ್ಯಾಯಾಲಯದ 26 ಹೆಚ್ಚುವರಿ ಕಾಯಂ ವಕೀಲರು, 179 ಜನ ಕಾಯಂ ವಕೀಲರಿಗೆ ಕಡ್ಡಾಯ ರಜೆ ನೀಡಲಾಗಿದೆ.



ಇದರ ಜೊತೆಗೆ 59 ಹೆಚ್ಚುವರಿ ಮುಖ್ಯ ಸ್ಥಾಯಿ ಮಂಡಳಿ ಮತ್ತು ಸ್ಥಾಯಿ ಪರಿಷತ್ ಸದಸ್ಯರನ್ನೂ ವಜಾ ಮಾಡಲಾಗಿದೆ.


ಸರ್ಕಾರಿ ಸೇವೆಯಲ್ಲಿ ಇದ್ದ ಕಾನೂನು ಅಧಿಕಾರಿಗಳ ಕಾರ್ಯಕ್ಷಮತೆ ಸರಿ ಇಲ್ಲದ ಕಾರಣ ಈ ಅದೇಶ ಹೊರಡಿಸಲಾಗಿದೆ ಎನ್ನಲಾಗುತ್ತಿದೆ.

Ads on article

Advertise in articles 1

advertising articles 2

Advertise under the article