-->
ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮದಲ್ಲಿ ಬದಲಾವಣೆ: ಇಲ್ಲಿದೆ ಹೆಚ್ಚಿನ ಮಾಹಿತಿ...

ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮದಲ್ಲಿ ಬದಲಾವಣೆ: ಇಲ್ಲಿದೆ ಹೆಚ್ಚಿನ ಮಾಹಿತಿ...

ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮದಲ್ಲಿ ಬದಲಾವಣೆ: ಇಲ್ಲಿದೆ ಹೆಚ್ಚಿನ ಮಾಹಿತಿ...





ಅಟಲ್ ಪಿಂಚಣಿ ಯೋಜನೆ ನಿವೃತ್ತಿ ಜೀವನಕ್ಕೆ ಒಂದು ಉತ್ತಮ ಹೂಡಿಕೆಯ ಯೋಜನೆಯಾಗಿದೆ. ಇದೀಗ ಯೋಜನೆಯ ಹೂಡಿಕೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.



ಕೇಂದ್ರ ಸರ್ಕಾರವು ದೇಶದ ಕೋಟ್ಯಾಂತರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಜಾರಿಗೆ ತಂದಿದೆ. ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ.




ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆ 18 ವರ್ಷದಿಂದ 40 ವರ್ಷದ ವರೆಗಿನ ನಾಗರಿಕರು ಪಡೆದುಕೊಳ್ಳಬಹುದಾಗಿದೆ. ಪಿಂಚಣಿ ಯೋಜನೆಗೆ ಚಂದಾದಾರರಾದ ಬಳಿಕ ಪ್ರತಿ ತಿಂಗಳು ನಿಗದಿತ ಹಣವನ್ನು ಪಾವತಿಸಬೇಕು. ಆ ಬಳಿಕ ತಮ್ಮ ನಿವೃತ್ತಿಯ ನಂತರ ಮಾಸಿಕವಾಗಿ ಕನಿಷ್ಠ 1,000 ಮತ್ತು ಗರಿಷ್ಠ 5,000 ಪಿಂಚಣಿ ಪಡೆಯಬಹುದು.



ಈ ಯೋಜನೆಯ ಹೂಡಿಕೆ ನಿಯಮದಲ್ಲಿ ಬದಲಾವಣೆ ಆಗಿದೆ... ಅದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ...



ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮ 2022ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ತಿದ್ದುಪಡಿ ಯಾ ಬದಲಾವಣೆ ಪ್ರಕಾರ ಆದಾಯ ತೆರಿಗೆ ಕಟ್ಟುವವರು ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯುವ ಅರ್ಹತೆಯನ್ನು ಹೊಂದಿರುವುದಿಲ್ಲ.


2022ರ ಅಕ್ಟೋಬರ್ 1ರಿಂದ ಅಥವಾ ಅದರ ಬಳಿಕ ಅಟಲ್ ಪಿಂಚಣಿ ಯೋಜನೆಯ ಚಂದಾ ಮಾಡಿದವರ ಖಾತೆ ಮುಚ್ಚಲಾಗುತ್ತದೆ. ಆದಾಯ ತೆರಿಗೆ ಪಾವತಿದಾರರು ಎಂದರೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಆದಾಯ ತೆರಿಗೆ ಕಟ್ಟುವ ನಾಗರಿಕರು ಎಂದರ್ಥ.



ಈ ಬಗ್ಗೆ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಅಕ್ಟೋಬರ್ 1, 2022ರ ಬಳಿಕ ಯಾರು ಆದಾಯ ತೆರಿಗೆ ಪಾವತಿದಾರರು ಆಗಿರುತ್ತಾರೋ ಅಥವಾ ಆಗಿದ್ದರೋ ಅಂಥವರಿಗೆ ಅಟಲ್ ಪಿಂಚಣಿ ಯೋಜನೆಯ ಫಲಾನುಭವಿ ಆಗುವ ಅರ್ಹತೆ ಇಲ್ಲ ಎಂದು ಸುತ್ತೋಲೆ ಹೇಳಿದೆ.



ಈ ಅವಧಿಯ ನಂತರ, ಅಟಲ್ ಪಿಂಚಣಿ ಯೋಜನೆಯ ಚಂದಾ ಮಾಡಿದವರು, ಅರ್ಜಿ ಸಲ್ಲಿಸಿದ ಮೊದಲು ಯಾ ಆ ಬಳಿಕ ಇನ್‌ಕಮ್ ಟ್ಯಾಕ್ಸ್ ಕಟ್ಟಿದ್ದರೆ, ಅಂಥವರ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ಮುಚ್ಚಲಾಗುತ್ತದೆ. ಖಾತೆಯಲ್ಲಿ ಇದ್ದ ಮೊತ್ತವನ್ನು ಚಂದಾದಾರಿಗೆ ವಾಪಸ್ ಮಾಡಲಾಗುತ್ತದೆ ಎಂದು ಸುತ್ತೋಲೆ ತಿಳಿಸಿದೆ.


ಅಟಲ್‌ ಪಿಂಚಣಿ ಯೋಜನೆ:  ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!

ಸದ್ರಿ ಪಿಂಚಣಿ ಯೋಜನೆ ಅಡಿ, ಚಂದಾದಾರರಿಗೆ ನಿವೃತ್ತಿ ನಂತರ ಪ್ರತಿ ತಿಂಗಳು ಕನಿಷ್ಠ ರೂ. 1,000/- ಮತ್ತು ಗರಿಷ್ಠ ರೂ. 5,000/- ಪಿಂಚಣಿ ನೀಡಲಾಗುತ್ತದೆ. ಕನಿಷ್ಠ ಪಿಂಚಣಿಯ ಪ್ರಯೋಜನವನ್ನು ಕೇಂದ್ರ ಸರ್ಕಾರ ಗ್ಯಾರಂಟಿ ನೀಡುತ್ತದೆ.



ಈ ಯೋಜನೆ ಹೂಡಿಕೆ ಕ್ಲಿಷ್ಟವಾಗಿಲ್ಲ. ಒಂದು ದಿನಕ್ಕೆ ಕೇವಲ 7 ರೂಪಾಯಿ ಠೇವಣಿ ಮಾಡುವ ಚಂದಾದಾರರು ತಿಂಗಳಿಗೆ ರೂ. 5000/- ಪಿಂಚಣಿ ಪಡೆಯಬಹುದು.



ಆದರೆ, ಅವರ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು ಮತ್ತು ಚಂದಾದಾರರು ಉಳಿತಾಯ ಬ್ಯಾಂಕ್ ಖಾತೆ ಯಾ ಅಂಚೆ ಕಚೇರಿಯಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. ಚಂದಾದಾರರು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಬಹುದು.



18 ವರ್ಷ ಮೇಲ್ಪಟ್ಟ ವ್ಯಕ್ತಿ ಅಟಲ್ ಪಿಂಚಣಿ ಯೋಜನೆ ತೆರೆಯಬಹುದು. ಅವರು ಪ್ರತಿ ತಿಂಗಳು ರೂ. 42 ಕಟ್ಟಿದರೆ ರೂ. 1000/- ಮಾಸಿಕ ಪಿಂಚಣಿ ಬರುತ್ತದೆ. ಅದೇ ರೀತಿ ತಿಂಗಳಿಗೆ ಕೇವಲ 84 ರೂ. ಪಾವತಿಸಬೇಕು. ಆಗ ನಿಮಗೆ ರೂ. 2000/- ಮಾಸಿಕ ಪಿಂಚಣಿ ಬೇರುತ್ತದೆ.

ತಿಂಗಳ ಪಿಂಚಣಿ ರೂ. 3000/- ಬೇಕಾದಲ್ಲಿ ರೂ. 126/- ಮಾಸಿಕ ಪಿಂಚಣಿ ರೂ .4000 ರೂಪಾಯಿಗೆ 168 ರೂಪಾಯಿ ಮತ್ತು ಮಾಸಿಕ ಪಿಂಚಣಿ 5000 ಗಳನ್ನು ಪಡೆಯಲು ಪ್ರತಿ ತಿಂಗಳು 210 ರೂಪಾಯಿ ಹೂಡಿಕೆ ಮಾಡಬೇಕು. 

Ads on article

Advertise in articles 1

advertising articles 2

Advertise under the article