-->
Notification for Appointment of Oath Commissioner: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 919 ಓತ್ ಕಮಿಷನರ್ ಹುದ್ದೆ; ನೇಮಕಾತಿಗೆ ಅಧಿಸೂಚನೆ ಪ್ರಕಟ

Notification for Appointment of Oath Commissioner: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 919 ಓತ್ ಕಮಿಷನರ್ ಹುದ್ದೆ; ನೇಮಕಾತಿಗೆ ಅಧಿಸೂಚನೆ ಪ್ರಕಟ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 919 ಓತ್ ಕಮಿಷನರ್ ಹುದ್ದೆ; ನೇಮಕಾತಿಗೆ ಅಧಿಸೂಚನೆ ಪ್ರಕಟ




ರಾಜ್ಯದಲ್ಲಿ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಖಾಲಿ ಇರುವ Oath commissioner ಸ್ಥಾನಗಳನ್ನು ತುಂಬಲು ಯುವ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-08-2022 ಅಪರಾಹ್ನ 4-00 ಗಂಟೆಯ ವರೆಗೆ

ರಾಜ್ಯದ ಹೈಕೋರ್ಟ್ ಪೀಠ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಸಿವಿಲ್ ವ್ಯಾಜ್ಯಗಳಲ್ಲಿ ಅಫಿದಾವಿತ್ ಅಟೆಸ್ಟ್ ಮಾಡಲು ಓತ್ ಕಮಿಷನರ್ ಗಳಿಗೆ ಅಧಿಕಾರ ನೀಡಲಾಗುತ್ತದೆ.

ಈ ಮೇಲಿನ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು 29-08-2022 ರಂದು ಎರಡು ವರ್ಷಕ್ಕೆ ಕಡಿಮೆ ಇಲ್ಲದಂತೆ, ನಾಲ್ಕು ವರ್ಷ ಮೀರದಂತೆ ವಕೀಲರಾಗಿ ಅನುಭವ ಹೊಂದಿರಬೇಕು.

ನೇಮಕಾತಿ ಅವಧಿ ಮೂರು ವರ್ಷದ್ದಾಗಿದ್ದು, ಏಳು ವರ್ಷಗಳ ವರೆಗೆ ಈ ಸೇವಾವಧಿಯನ್ನು ವಿಸ್ತರಿಸಬಹುದಾಗಿದೆ.

ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಸಂಪರ್ಕಕ್ಕಾಗಿ ತಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಜಿಲ್ಲಾ ಕೋರ್ಟ್ ಗಳಲ್ಲಿ ಓತ್ ಕಮಿಷನರ್ ಆಗಿ ನೇಮಕಾತಿ ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅಗತ್ಯ ದೃಢೀಕೃತ ದಾಖಲಾತಿಗಳ ಜೊತೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಓತ್ ಕಮಿಷನರ್ ಹುದ್ದೆಗೆ ಅರ್ಜಿ ಸಲ್ಲಿಸುವವರೂ ಆನ್ ಲೈನ್ ಮೂಲಕ ಸೂಕ್ತ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಬ್ಬ ಅಭ್ಯರ್ಥಿಗೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇರುತ್ತದೆ. ನೇಮಕಾತಿಯನ್ನು ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸುವ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ತಿಳಿಸಲಾಗುತ್ತದೆ.

ನೇಮಕಗೊಂಡ ಯಶಸ್ವೀ ಅಭ್ಯರ್ಥಿಗಳು ಮೂಲ ದಾಖಲೆಗಳ ಜೊತೆಗೆ ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿಯೊಂದಿಗೆ ಹಾಜರಾಗತಕ್ಕದ್ದು.

ಹೆಚ್ಚಿನ ವಿವರಗಳನ್ನು ಹೈಕೋರ್ಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆಯಬಹುದು.

karnatakajudiciary.kar.nic.in/recruitment.asp

ಜಿಲ್ಲೆ ಹಾಗೂ ಹುದ್ದೆಯ ಸಂಖ್ಯೆ

1. Bengaluru Metropolitan Area 87

2. Bengaluru Rural 22

3. Bagalkot 23

4. Ballari 29

5. Belagavi 56

6. Bidar 26

7. Chamarajanagar 19

8. Chickballapur 29

9. Chikkamagaluru 33

10. Chitradurga 26

11. D.K. – Mangaluru 28

12. Davanagere 22

13. Dharwad 26

14. Gadag 19

15. Hassan 32

16. Haveri 34

17. Kalaburagi 39

18. Kodagu – Madikeri 20

19. Kolar 26

20. Koppal 16

21. Mandya 34

22. Mysuru 35

23. Raichur 27

24. Ramanagara 21

25. Shivamogga 38

26. Tumakuru 52

27. Udupi 11

28. U.K.-Karwar 49

29. Vijayapura 16

30. Yadgiri 16

31. Bench at Dharwad 4

32. Bench at Kalaburagi 4

Total 919

 

Ads on article

Advertise in articles 1

advertising articles 2

Advertise under the article