ಸರ್ಕಾರಿ ನೌಕರರಿಗೆ ಶಿಶುಪಾಲನಾ ರಜೆ: ಸರ್ಕಾರಿ ಆದೇಶದ ಪ್ರಕಾರ ಎಷ್ಟು ದಿನ ಗೊತ್ತೇ..?
ಸರ್ಕಾರಿ ನೌಕರರಿಗೆ ಶಿಶುಪಾಲನಾ ರಜೆ: ಸರ್ಕಾರಿ ಆದೇಶದ ಪ್ರಕಾರ ಎಷ್ಟು ದಿನ ಗೊತ್ತೇ..?
ಮಹಿಳಾ ಸರ್ಕಾರಿ ನೌಕರರು ತಮ್ಮ ಪೂರ್ತಿ ಸೇವಾವಧಿಯಲ್ಲಿ 180 ದಿನಗಳ ಶಿಶುಪಾಲನಾ ರಜೆಯನ್ನು ಪಡೆಯಬಹುದು. ದಿನಾಂಕ 21-06-2021ರ ಸರ್ಕಾರಿ ಆದೇಶದ ಪ್ರಕಾರ ಸಕ್ಷಮ ಪ್ರಾಧಿಕಾರವು ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆಯನ್ನು ಮಂಜೂರು ಮಾಡಲು ನಿರ್ದೇಶಿತವಾಗಿದೆ.
ಸರ್ಕಾರಿ ಆದೇಶ: ಸಂಖ್ಯೆ: ಅಇ 4(ಇ)ಸೇನಿಸೇ 2021 ದಿನಾಂಕ 21-06-2021
ಈ ರಜೆಯನ್ನು ಸರ್ಕಾರಿ ನೌಕರರ ಮಗು 18 ವರ್ಷ ಆಗುವವರೆಗೆ ಆರೈಕೆಗಾಗಿ ಒಂದು ಸಲಕ್ಕೆ 15 ದಿನಕ್ಕಿಂತ ಕಡಿಮೆ ಇಲ್ಲದಂತೆ ಪಡೆಯಬಹುದು.
ಬುದ್ದಿಮಾಂದ್ಯ ಯಾ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ನೌಕರರಿಗೆ ವೈದ್ಯಕೀಯ ಮಂಡಳಿ ನೀಡುವ ಪ್ರಮಾಣ ಪತ್ರದ ಆಧಾರದ ಮೇಲೆ ಕೆಲವು ಷರತ್ತಿಗೆ ಒಳಪಟ್ಟು ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಇಡೀ ಸೇವಾವಧಿಯಲ್ಲಿ ಎರಡು ವರ್ಷದ ವರೆಗೆ ಅಂದರೆ 730 ದಿನಗಳ ಶಿಶು ಪಾಲನಾ ರಜೆಯನ್ನು ಪಡೆಯಬಹುದು ಎಂದು ಆದೇಶ ಹೇಳಿದೆ.
ಮಹಿಳಾ ಸರ್ಕಾರಿ ನೌಕರರು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ, ಅತ್ಯಂತ ಕಿರಿಯ ಮಗು 18 ವರ್ಷ ತುಂಬುವ ವರೆಗೆ ಈ ರಜೆ ಸೌಲಭ್ಯವನ್ನು ಪಡೆಯಬಹುದು. ಆದರೆ, ಈ ಆದೇಶದ ಮುಂಚೆ ಪಡೆದ ಯಾವುದೇ ಬಗೆಯ ರಜೆಯನ್ನು ಶಿಶುಪಾಲನಾ ರಜೆಯಾಗಿ ಪರಿವರ್ತಿಸಲಾಗದು.
ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರ ಈ ರಜೆಯ ಮಂಜೂರಾತಿ ಬಗ್ಗೆ ಸೇವಾ ಪುಸ್ತಕದಲ್ಲಿ ದಾಖಲಿಸಿ ನಿಗದಿತ ನಮೂನೆಯಲ್ಲಿ ಲೆಕ್ಕ ಇಡಬೇಕು.
ಸರ್ಕಾರಿ ಆದೇಶ: ಸಂಖ್ಯೆ: ಅಇ 4(ಇ)ಸೇನಿಸೇ 2021 ದಿನಾಂಕ 21-06-2021
ಇದನ್ನೂ ಓದಿ
ಪ್ರಿನ್ಸಿಪಾಲರ ಹುದ್ದೆಗೆ ಪದೋನ್ನತಿ: ಸೇವಾ ಜ್ಯೇಷ್ಠತೆ ನಿರ್ಧಾರ ಹೇಗೆ...?