ಡಿಜಿಟಲ್ ವಂಚಕರಿದ್ದಾರೆ ಎಚ್ಚರಿಕೆ!!- ದಾಖಲಾಗುತ್ತಿದೆ ತಿಂಗಳಿಗೆ ಲಕ್ಷ ಕೇಸು!
ಡಿಜಿಟಲ್ ವಂಚಕರಿದ್ದಾರೆ ಎಚ್ಚರಿಕೆ!!- ದಾಖಲಾಗುತ್ತಿದೆ ತಿಂಗಳಿಗೆ ಲಕ್ಷ ಕೇಸು!
ಇತ್ತೀಚಿನ ದಿನಗಳಲ್ಲಿ ಜನ ಡಿಜಿಟಲ್ ಪೇಮೆಂಟ್‌ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಅದೇ ರೀತಿ ವಂಚಕರೂ ಈ ಕ್ಷೇತ್ರದಲ್ಲಿ ತಮ್ಮ ಕೈಚಳಕ ಮೆರೆಯುತ್ತಿದ್ದಾರೆ.
ಅಚ್ಚರಿಯಾದರೂ ಸತ್ಯ. ಪ್ರತಿ ತಿಂಗಳಿಗೆ ಒಂದು ಲಕ್ಷದಷ್ಟು ದೂರುಗಳು ಇ ಪೇಮೆಂಟ್ ವೇಳೆ ನಡೆದ ವಂಚನೆ/ಮೋಸ, ಯಾ ಲೋಪದ ಪ್ರಕರಣಗಳು ದಾಖಲಾಗತ್ತಿವೆ. ಇದರಲ್ಲಿ ಅರ್ಧಕ್ಕರ್ಧ UPI ಲಿಂಕ್ ಆಧಾರಿತ ಇ-ಪೇಮೆಂಟ್ ವ್ಯವಹಾರಗಳಾಗಿವೆ.
ಡಿಜಿಟಲ್ ಪಾವತಿಗಳು ಇತ್ತಿಚಿನ ದಿನಗಳಲ್ಲಿ ಅತಿ ಹೆಚ್ಚು ನಡೆಯುತ್ತಿದೆ. ಅದೇ ರೀತಿ ವಂಚನೆಯ ಗ್ರಾಫ್ ಕೂಡ ಏಕಾಏಕಿ ಏರಿಕೆಯಾಗುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಪೊಲೀಸ್ ಠಾಣೆಗಳಲ್ಲಿ ದಾಖಲಾದ ದೂರುಗಳನ್ನ ಆಧರಿಸಿ, ಮೇ ತಿಂಗಳಲ್ಲಿ ಹಣಕಾಸು ವಂಚನೆಯ ಪ್ರಕರಣಗಳು 61,100 ಆಗಿತ್ತು. ಜೂನ್ ಜುಲೈನಲ್ಲಿ ಅದರ ಸಂಖ್ಯೆ ತಲಾ 98600ಕ್ಕೇ ಏರಿದ್ದರೆ, ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ ಈಗಾಗಲೇ 80 ಸಾವಿರವನ್ನು ದಾಟಿದೆ.
ಸರ್ಕಾರಿ ದಾಖಲೆಗಳ ಪ್ರಕಾರ, ತನಿಖಾ ಅಧಿಕಾರಿಗಳು ಹಂಚಿಕೊಂಡ ಮಾಹಿತಿಯಂತೆ ಈ ದೂರುಗಳಲ್ಲಿ ಹೆಚ್ಚಿನವು 58,712 ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಆಧಾರಿತವಾಗಿ ನಡೆದಿದೆ.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಿಮ್ ಕಾರ್ಡ್ ಸ್ವಿಚಿಂಗ್ ಒಳಗೊಂಡ ವಂಚನೆಗಳ ಬಗ್ಗೆ 18980 ದೂರುಗಳು ಬಂದಿವೆ.
ಉಳಿದಂತೆ, ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಗಳು 7,649, ವಂಚನೆ ಅಥವಾ ಧ್ವನಿ ಫಿಶಿಂಗ್ ಕರೆಗಳು 7,503), ಇ-ವ್ಯಾಲೆಟ್ ಕಳ್ಳತನಗಳು 4,310, ಡಿಮ್ಯಾಟ್ ಖಾತೆ ಹಗರಣಗಳು 778, ಮತ್ತು ಇಮೇಲ್ ಸ್ವಾಧೀನಗಳು 187 ಸೇರಿವೆ.
ಹಿಂದೂಸ್ತಾನ್ ಟೈಮ್ಸ್ ಮತ್ತು ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಕಳೆದ 30 ದಿನದ ಅವಧಿಯಲ್ಲಿ 79,178 ಪ್ರಕರಣಗಳು ದಾಖಲಾಗುತ್ತಿದೆ. ಅಂದರೆ ಸರಾಸರಿ ದಿನಕ್ಕೆ 3,000 ಪ್ರಕರಣಗಳು!! ಜೂನ್ 9ರಂದು ಒಂದೇ ದಿನ 3,500 ಪ್ರಕರಣಗಳು ವರದಿಯಾಗಿವೆ ಎಂಬ ವಿಷಯ ಡಿಜಿಟಲ್ ಸ್ನೇಹಿಗಳನ್ನು ಬೆಚ್ಚಿ ಬೀಳಿಸಿದೆ.
ಕೋವಿಡ್ ಪಶ್ಚಾತ್ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡಿದೆ. 2021ರಲ್ಲಿ ಪ್ರಕರಣಗಳು ದಿನಕ್ಕೆ ಸರಾಸರಿ 1,500 ರಷ್ಟಿತ್ತು. 2021ಕ್ಕೆ ಹೋಲಿಸಿದರೆ, ಇದೀಗ ಪ್ರತಿದಿನ ದಾಖಲಾಗುವ ಪ್ರಕರಣಗಳ ಸಂಖ್ಯೆ ಡಬಲ್ ಆಗಿದೆ.
ಈ ಅಪಾಯ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಯುಪಿಐ ಬಳಸುವ ಗ್ರಾಹಕರು ಎಚ್ಚರಿಕೆಯಿಂದ ಅದನ್ನು ಬಳಸುವಂತಾಗಬೇಕು. ಇದರ ಜೊತೆಗೆ ಸರ್ಕಾರವೂ ಇಂತಹ ಅಪರಾಧಗಳ ತನಿಖೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.