ಕೋರ್ಟ್ ತೀರ್ಪು 'ಡಿಜಿಟಲ್ ಸಹಿ' ಸಹಿತ ಸುಲಭವಾಗಿ ಲಭ್ಯವಾಗಬೇಕು: ಸುಪ್ರೀಂ ಕೋರ್ಟ್ ನಿರ್ದೇಶನ
ಕೋರ್ಟ್ ತೀರ್ಪು 'ಡಿಜಿಟಲ್ ಸಹಿ' ಸಹಿತ ಸುಲಭವಾಗಿ ಲಭ್ಯವಾಗಬೇಕು: ಸುಪ್ರೀಂ ಕೋರ್ಟ್ ನಿರ್ದೇಶನ
ನ್ಯಾಯಾಲಯ ಮತ್ತು ನ್ಯಾಯಮಂಡಳಿಯ ತೀರ್ಪುಗಳು ಡಿಜಿಟಲ್ ಸಹಿತ ಸುಲಭವಾಗಿ ಅಂತರ್ಜಾಲದಲ್ಲಿ ಲಭ್ಯವಾಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನ್ಯಾ. ಧನಂಜಯ ವೈ ಚಂದ್ರಚೂಡ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ಮುದ್ರಿತ ತೀರ್ಪುಗಳನ್ನು ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡುವುದನ್ನು ತಪ್ಪಿಸುವಂತೆ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಕೋರ್ಟ್ ಆದೇಶಗಳು ಸುಲಭವಾಗಿ ಜನರಿಗೆ ಸಿಗುವಂತಾಗಬೇಕು. ಅದೇ ರೀತಿ ಅವುಗಳು ಡಿಜಿಟಲ್ ಸಹಿ ಹೊಂದಿರಬೇಕು. ಅದರ ಬದಲು, ಕೋರ್ಟ್ ತೀರ್ಪುಗಳು ಮುದ್ರಿತ ಪ್ರತಿಗಳಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ತೀರ್ಪಿನ ಪ್ರತಿಗಳನ್ನು ಪ್ರಿಂಟ್ ಮಾಡಿ ಬಳಿಕ ಸ್ಕ್ಯಾನ್ ಮಾಡುವುದು ಒಂದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಇದರಿಂದ ಯಾವುದೇ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ
ವಕೀಲರು ಅಟೆಸ್ಟ್ ಮಾಡಿದ ಆದೇಶ ಡೌನ್‌ಲೋಡ್ ಪ್ರತಿ ಸಾಕು, ದೃಢೀಕೃತ ಪ್ರತಿ ಅನಗತ್ಯ
ಕೋರ್ಟ್ ಆದೇಶದ ವೆಬ್‌ಸೈಟ್ ಪ್ರತಿ ಪರಿಗಣನೆಗೆ ಅರ್ಹ, ದೃಢೀಕೃತ ಪ್ರತಿಗೆ ಕಾಯಬೇಕಿಲ್ಲ: ಹೈಕೋರ್ಟ್