ಡಿಸ್ಟ್ರಿಕ್ಟ್ ಜಡ್ಜ್ ಆಗಿ ಮಂಗಳೂರಿನ ಯುವ ವಕೀಲ ಸಿರಾಜುದ್ದೀನ್ ನೇಮಕ
ಡಿಸ್ಟ್ರಿಕ್ಟ್ ಜಡ್ಜ್ ಆಗಿ ಮಂಗಳೂರಿನ ಯುವ ವಕೀಲ ಸಿರಾಜುದ್ದೀನ್ ನೇಮಕ
ಕರ್ನಾಟಕ ಹೈಕೋರ್ಟ್, ನ್ಯಾಯಾಂಗ ಇಲಾಖೆ ನಡೆಸುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ 2022ನೇ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ಸಿರಾಜುದ್ದೀನ್ ಎ. ಆಯ್ಕೆಯಾಗಿದ್ದಾರೆ.
ಕಳೆದ 16 ವರ್ಷಗಳಿಂದ ಮಂಗಳೂರಿನಲ್ಲಿ ವಕೀಲರಾಗಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕ್ರಿಮಿನಲ್ ವಕೀಲರಾಗಿ ಸಾಕಷ್ಟು ಹೆಸರು ಮಾಡಿದ್ಧಾರೆ.
ಮೂಲತಃ ಬೆಳ್ತಂಗಡಿ ತಾಲೂಕಿನವರಾದ ಇವರು ಇಳಂತಿಲ ಗ್ರಾಮದ ಇದಿನಬ್ಬ ಬ್ಯಾರಿ ಮತ್ತು ಮೈಮೂನ ದಂಪತಿಯ ಮಗನಾಗಿದ್ದಾರೆ.
ಬೆಳ್ತಂಗಡಿಯ ಉರುವಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಪದ್ಮುಂಜದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಬಳಿಕ, ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಸೇಕ್ರಡ್ ಹಾರ್ಟ್ ಕಾಲೇಜ್ ನಲ್ಲಿ ಬಿಎ ಪದವಿ ಪಡೆದ ಅವರು, ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ತಮ್ಮ ಎಲ್‌ಎಲ್‌ಬಿ ಪದವಿಯನ್ನು ಪಡೆದರು.
ಮಂಗಳೂರು ವಕೀಲರ ಸಂಘದ ಸದಸ್ಯರೂ ಆಗಿರುವ ಸಿರಾಜುದ್ದೀನ್ ಮಿತಭಾಷಿ, ಸ್ನೇಹಪರ ವ್ಯಕ್ತಿತ್ವ ಹೊಂದಿದ್ದಾರೆ. ನೇರ ನಡೆ ನುಡಿಯ ಜನಪರ ಕಾಳಜಿ ಹೊಂದಿರುವ ಸಿರಾಜುದ್ದೀನ್ ರಾಜ್ಯ ನ್ಯಾಯಾಂಗಕ್ಕೆ ಮಂಗಳೂರಿನ ಹೆಮ್ಮೆಯ ಕೊಡುಗೆಯಾಗಿದ್ದಾರೆ.
ಇದನ್ನೂ ಓದಿ:
ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ