Deference in I-day, R-day : ಸ್ವಾತಂತ್ರ್ಯ ದಿನ, ಗಣರಾಜ್ಯ ಧ್ವಜಾರೋಹಣದಲ್ಲಿ ವ್ಯತ್ಯಾಸ: ನಿಮಗೆಷ್ಟು ಗೊತ್ತು..?
ಸ್ವಾತಂತ್ರ್ಯ ದಿನ, ಗಣರಾಜ್ಯ ಧ್ವಜಾರೋಹಣದಲ್ಲಿ ವ್ಯತ್ಯಾಸ: ನಿಮಗೆಷ್ಟು ಗೊತ್ತು..?
ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮತ್ತು ಗಣರಾಜ್ಯೋತ್ಸವದಂದು ಧ್ವಜ ಅನಾವರಣ ಇವೆರಡರ ವ್ಯತ್ಯಾಸವೇನು?
ಮೊದಲ ವ್ಯತ್ಯಾಸ
ಆಗಸ್ಟ್ 15 ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಧ್ವಜವನ್ನು ಹಗ್ಗದಿಂದ ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ, ನಂತರ ಧ್ವಜವನ್ನು ಅರಳಿಸಲಾಗುತ್ತದೆ. ತ್ರಿವರ್ಣ ಧ್ವಜ ಹಾರಿಸುವ ಕ್ರಮವನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಏಕೆಂದರೆ ಆಗಸ್ಟ್ 15, 1947ರ ಮಹೋನ್ನತ ಐತಿಹಾಸಿಕ ಘಟನೆಯನ್ನು ಗೌರವಿಸಲು ದೇಶದ ಮಾನ್ಯ ಪ್ರಧಾನ ಮಂತ್ರಿಗಳು ಈ ಕಾರ್ಯವನ್ನು ನೆರವೇರಿಸುತ್ತಾರೆ. ಅಂದಿನ ಧ್ವಜಾರೋಹಣವನ್ನು ಇಂಗ್ಲಿಷಿನಲ್ಲಿ ಫ್ಲಾಗ್ ಹೋಸ್ಟಿಂಗ್ (Flog Hosting) ಎನ್ನುತ್ತಾರೆ.
ಆದರೆ
ಜನವರಿ 26 ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ, ಮತ್ತು ಅದನ್ನು ಅರಳಿಸಲಾಗುತ್ತದೆ. ಇದನ್ನು ಧ್ವಜ ಅನಾವರಣ ಎಂದು ಕರೆಯಲಾಗುತ್ತದೆ. ಇಂಗ್ಲಿಷ್ ನಲ್ಲಿ ಅನ್ಫರ್ಲಿಂಗ್ (Unfurling) ಎಂದು ಕರೆಯುತ್ತಾರೆ.
ಎರಡನೇ ವ್ಯತ್ಯಾಸ
ಆಗಸ್ಟ್ 15 ರಂದು, ಕೇಂದ್ರ ಸರ್ಕಾರದ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ, ಏಕೆಂದರೆ ಸ್ವಾತಂತ್ರ್ಯದ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿರಲಿಲ್ಲ ಮತ್ತು ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಿರುವುದಿಲ್ಲ. ಮತ್ತು ಮುನ್ನಾ ದಿನದ ಸಂಜೆ, ಮಾನ್ಯ ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ತಮ್ಮ ಸಂದೇಶವನ್ನು ನೀಡುತ್ತಾರೆ.
ಆದರೆ
ದೇಶದಲ್ಲಿ ಸಂವಿಧಾನದ ಅನುಷ್ಠಾನದ ಸ್ಮರಣಾರ್ಥವಾಗಿ ಆಚರಿಸಲಾಗುವ ಜನವರಿ 26, ಈ ದಿನದಂದು ಸಂವಿಧಾನದ ಮುಖ್ಯಸ್ಥರಾದ ರಾಷ್ಟ್ರಪತಿಯವರು ಧ್ವಜಾರೋಹಣ ಮಾಡುತ್ತಾರೆ.
ಮೂರನೇ ವ್ಯತ್ಯಾಸ
ಭಾರತದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳು ಕೆಂಪು ಕೋಟೆಯಿಂದ ಧ್ವಜಾರೋಹಣ ಮಾಡುತ್ತಾರೆ.
ಆದರೆ
ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜ ಅನಾವರಣ ಮಾಡಲಾಗುತ್ತದೆ.