ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ತಡರಾತ್ರಿ ಅನುಮತಿ ನೀಡಿದ ಹೈಕೋರ್ಟ್
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ತಡರಾತ್ರಿ ಅನುಮತಿ ನೀಡಿದ ಹೈಕೋರ್ಟ್
ತಡರಾತ್ರಿ ನಡೆಸಿದ ಕಲಾಪದಲ್ಲಿ ಕರ್ನಾಟಕ ಹೈಕೋರ್ಟ್ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಸದ್ರಿ ಸ್ಥಳವು 'ಪೂಜಾ ಸ್ಥಳ' ಎಂದು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ದಾಖಲೆ ನೀಡಿಲ್ಲ ಬೆಂಗಳೂರಿನ ಈದ್ಗಾ ಮೈದಾನದ ಪ್ರಕರಣಲ್ಲಿ ಸೊತ್ತಿನ ವಿವಾದ ಇದ್ದು ಹುಬ್ಬಳ್ಳಿಯು ಈಗ ಮೈದಾನಕ್ಕೆ ಸಂಬಂಧಿಸಿದಂತೆ ಸೊತ್ತಿನ ಬಗ್ಗೆ ಯಾವುದೇ ವಿವಾದ ಇಲ್ಲ ಈ ಸ್ಥಳವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ್ದಾಗಿದೆ ಎಂಬುದನ್ನು ಈ ಹಿಂದೆಯೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ ಎಂದು ಹೈಕೋರ್ಟ್ ಗಮನಿಸಿತು.
ಹೀಗಾಗಿ ಕರ್ನಾಟಕ ಮುನಿಸಿಪಾಲ್ ಕಾರ್ಪೊರೇಷನ್ ಕಾಯ್ದೆಯ ಕಲಂ 176 ಅಡಿಯಲ್ಲಿ ಮೈದಾನದ ಬಗ್ಗೆ ಆಯುಕ್ತರು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಹೈಕೋರ್ಟ್ ಧಾರವಾಡ ಪೀಠ ತನ್ನ ತೀರ್ಪಿನಲ್ಲಿ ಹೇಳಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ತಡೆ ನೀಡಬೇಕು ಎಂದು ಮುಸ್ಲಿಂ ಪರ ಸಂಘಟನೆಗಳು ಸಲ್ಲಿಸಿದ್ದ ಮನವಿ ಅರ್ಜಿಯನ್ನು ತಿರಸ್ಕರಿಸಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಿಂದೂ ಪರ ಸಂಘಟನೆಗಳು ಕೋರಿಕೆ ಸಲ್ಲಿಸಿತ್ತು. ಮೈದಾನವನ್ನು ಕಾರ್ಯಕ್ರಮ ನಡೆಸಲು ಅನುಮತಿಸುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಹುಬ್ಬಳ್ಳಿ ಮತ್ತು ಧಾರವಾಡ ಮೇಯರ್ ರಚಿಸಿದ್ದ ಐವರು ಸದಸ್ಯರ ಸಮಿತಿ ವರದಿ ನೀಡಿದ್ದು ಗಣೇಶೋತ್ಸವ ಸ್ಥಳ ಸದ್ರಿ ಕಾರ್ಯಕ್ರಮಕ್ಕೆ ನೀಡಬಹುದು ಎಂದು ಶಿಫಾರಸು ಮಾಡಿತ್ತು.
ಈ ಸಮಿತಿಯ ಶಿಫಾರಸಿನ ಪ್ರಕಾರ ಆಯುಕ್ತರು ಗಣೇಶೋತ್ಸವಕ್ಕೆ ಮೈದಾನವನ್ನು ನೀಡಿ ಆದೇಶ ಹೊರಡಿಸಿದ್ದರು. ಆಯುಕ್ತರ ಈ ಕ್ರಮ ಸರಿಯಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು ಅತಿ ಅಪರೂಪದ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯ ಪೀಠ ತಡರಾತ್ರಿ ಈ ಆದೇಶ ಹೊರಡಿಸಿದೆ.