-->
 ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್

ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್

 ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್





ಮಹತ್ವದ ಬೆಳವಣಿಗೆಯೊಂದರಲ್ಲಿ ಜನನ-ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.



ಚಿಂಚೋಳಿ ವಕೀಲರ ಸಂಘದ ​​ಅಧ್ಯಕ್ಷ ಸುದರ್ಶನ ಬಿರಾದಾರ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಕೃಷ್ಣ ದೀಕ್ಷಿತ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.


ಪ್ರಕರಣ: ಸುದರ್ಶನ ಬಿರಾದರ್ Vs ಕರ್ನಾಟಕ (ಕರ್ನಾಟಕ ಹೈಕೋರ್ಟ್)


ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 18-07-2022ರಂದು ಅಧಿಸೂಚನೆ ಹೊರಡಿಸಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿತ್ತು.



ರಾಜ್ಯದಲ್ಲಿ ಜನನ, ಮರಣ ನೋಂದಣಿ ತಿದ್ದುಪಡಿಗೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (JMFC) ನ್ಯಾಯಾಲಯದ ವ್ಯಾಪ್ತಿಯಲ್ಲಿ ಇತ್ತು. ಆದರೆ, ಸರ್ಕಾರಿ ಅಧಿಸೂಚನೆ ಪ್ರಕಾರ, ಈ ತಿದ್ದುಪಡಿಯ ನ್ಯಾಯವ್ಯಾಪ್ತಿಯನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್‌)ಕ್ಕೆ ನೀಡಲಾಗಿತ್ತು.



ಈ ಬಗ್ಗೆ ರಾಜ್ಯವ್ಯಾಪಿ ವಕೀಲರ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು ಸೇರಿದಂತೆ ಎಲ್ಲೆಡೆ ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.


ಇದನ್ನೂ ಓದಿ:

ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ




Ads on article

Advertise in articles 1

advertising articles 2

Advertise under the article