ಬಿಸಿಯೂಟ ಗುತ್ತಿಗೆ ನೌಕರರು ಕನಿಷ್ಟ ವೇತನ ಪಡೆಯಲು ಅರ್ಹರಲ್ಲ: ಕರ್ನಾಟಕ ಹೈಕೋರ್ಟ್
ಬಿಸಿಯೂಟ ಗುತ್ತಿಗೆ ನೌಕರರು ಕನಿಷ್ಟ ವೇತನ ಪಡೆಯಲು ಅರ್ಹರಲ್ಲ: ಕರ್ನಾಟಕ ಹೈಕೋರ್ಟ್
ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರು ಕನಿಷ್ಠ ವೇತನ ಕಾಯಿದೆಯಡಿ ವೇತನ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಹೈಕೋರ್ಟ್ ಹಂಗಾಮಿ ಸಿಜೆಐ ಅಲೋಕ್ ಅರಾಧೆ ಮತ್ತು ನ್ಯಾ. ಅನಿಲ್ ಬಿ ಕಟ್ಟಿ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪ್ರಸ್ತುತ ಜಾರಿಯಲ್ಲಿ ಇರುವ "ಕನಿಷ್ಠ ವೇತನ ಕಾಯಿದೆ" (Mimimun Wages Act)ಯಲ್ಲಿ ಉಲ್ಲೇಖಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯಿದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿಯ ದಿನಕ್ಕೆ ನಾಲ್ಕು ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯಿದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ದಿನಕ್ಕೆ 9 ಗಂಟೆಗಳ ಕೆಲಸದ ಅವಧಿ ಎಂಬ ನಿಯಮವಿದೆ ಮತ್ತು ಈ ಅರ್ಹತೆಗಳು ಬಿಸಿಯೂಟ ಗುತ್ತಿಗೆ ನೌಕರರಿಗೆ ಪಾಲನೆಯಾಗಿಲ್ಲ. ಅವರು ಕೇವಲ ನಾಲ್ಕು ಗಂಟೆಗಳಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಾರೆ. ಆ ಕಾರಣಕ್ಕೆ ಅವರಿಗೆ ಕಾಯ್ದೆ ಪ್ರಕಾರ, ಕನಿಷ್ಠ ವೇತನ ನೀಡಬೇಕು ಎಂಬ ವಿಚಾರವು ಸದ್ರಿ ಕಾಯಿದೆಯ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ. ಕನಿಷ್ಠ ವೇತನ ಕಾಯಿದೆಯಡಿ ಸೂಕ್ತ ಕನಿಷ್ಠ ವೇತನ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.