ಆಗಸ್ಟ್ 29ಕ್ಕೆ ಹೈಕೋರ್ಟ್ ಪೀಠಗಳಿಗೆ ರಜೆ: ಅಧಿಸೂಚನೆ ಪ್ರಕಟ
Friday, August 26, 2022
ಆಗಸ್ಟ್ 29ಕ್ಕೆ ಹೈಕೋರ್ಟ್ ಪೀಠಗಳಿಗೆ ರಜೆ: ಅಧಿಸೂಚನೆ ಪ್ರಕಟ
ಕರ್ನಾಟಕ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ ಹಾಗೂ ಹೈಕೋರ್ಟಿನ ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳು ಆಗಸ್ಟ್ 29ರಂದು ಯಾವುದೇ ಕಲಾಪ ನಡೆಸುವುದಿಲ್ಲ.
ಹೈಕೋರ್ಟ್‌ನ ಎಲ್ಲ ಪೀಠಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಅಧಿಸೂಚನೆ ಹೊರಡಿಸಿದೆ.
ಈ ರಜೆಗೆ ಪರ್ಯಾಯವಾಗಿ ಅಕ್ಟೋಬರ್ 15ರಂದು ಶನಿವಾರ ಎಲ್ಲ ಹೈಕೋರ್ಟ್ ಪೀಠಗಳು ಕಾರ್ಯ ನಿರ್ವಹಿಸಲಿವೆ ಎಂದು ಅಧಿಸೂಚನೆ ತಿಳಿಸಿದೆ.