ಕೃಷ್ಣಾಷ್ಟಮಿ ಆಚರಣೆ: ಶುಕ್ರವಾರದ ಕಲಾಪದಲ್ಲಿ ವ್ಯತಿರಿಕ್ತ ಆದೇಶ ಮಾಡದಂತೆ ಹೈಕೋರ್ಟ್ ಸೂಚನೆ
Thursday, August 18, 2022
ಕೃಷ್ಣಾಷ್ಟಮಿ ಆಚರಣೆ: ಶುಕ್ರವಾರದ ಕಲಾಪದಲ್ಲಿ ವ್ಯತಿರಿಕ್ತ ಆದೇಶ ಮಾಡದಂತೆ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಕೀಲರು, ಕಕ್ಷಿದಾರರು ಹಾಗೂ ಸಾಕ್ಷಿದಾರರು ಭಾಗವಹಿಸುವಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.
ಶುಕ್ರವಾರದ ಕಲಾಪದಲ್ಲಿ ಯಾವುದೇ ವ್ಯತಿರಿಕ್ತ ಆದೇಶ ಹೊರಡಿಸದಂತೆ ರಾಜ್ಯದ ವಿಚಾರಣಾ ನ್ಯಾಯಾಲಯ, ಜಿಲ್ಲಾ ನ್ಯಾಯಾಲಗಳಿಗೆ ಹೈಕೋರ್ಟ್ ಸೂಚನೆ ನೀಡಿ ಆದೇಶ ಹೊರಡಿಸಿದೆ.
18-08-2022ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪ್ರಭಾರ ರಿಜಿಸ್ಟ್ರಾರ್ ಮುರಳೀಧರ ಪೈ ಅವರು, ರಾಜ್ಯದ ಎಲ್ಲ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳು, ಕಮರ್ಷಿಯಲ್ ಕೋರ್ಟ್ ಗಳಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಿದ್ದಾರೆ.