ಪ್ರಿನ್ಸಿಪಾಲರ ಹುದ್ದೆಗೆ ಪದೋನ್ನತಿ: ಸೇವಾ ಜ್ಯೇಷ್ಠತೆ ನಿರ್ಧಾರ ಹೇಗೆ...?
ಪ್ರಿನ್ಸಿಪಾಲರ ಹುದ್ದೆಗೆ ಪದೋನ್ನತಿ: ಸೇವಾ ಜ್ಯೇಷ್ಠತೆ ನಿರ್ಧಾರ ಹೇಗೆ...?
ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜಿಗಳಲ್ಲಿ ಉಪನ್ಯಾಸಕರನ್ನು ಪ್ರಾಂಶುಪಾಲರಾಗಿ ಪದೋನ್ನತಿ ನೀಡುವ ಶಿಕ್ಷಣ ಇಲಾಖೆಯ ನಿಯಮಾವಳಿ ಏನು..? ಆಯ್ಕೆ ಬಗ್ಗೆ ಯಾವ ಕ್ರಮವನ್ನು ಅನುಸರಿಸಲಾಗುತ್ತದೆ ಎಂಬುದನ್ನು ನಾವು ಇಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ಈ ಬಗ್ಗೆ ಕರ್ನಾಟಕ ಸರ್ಕಾರ 2002 ಮತ್ತು 2012ರಲ್ಲಿ ಎರಡು ಆದೇಶ ಹೊರಡಿಸಿದ್ದು, ಇದರ ಪ್ರಕಾರ ಪ್ರಾಂಶುಪಾಲರ ಹುದ್ದೆಗೆ ಉಪನ್ಯಾಸಕರನ್ನು ಸೇವಾ ಜ್ಯೇಷ್ಠತೆ ಮತ್ತು ವಯೋ ಜ್ಯೇಷ್ಠತೆ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡುವಾಗ ಅಧ್ಯಾಪಕರು ಒಂದೇ ದಿನಾಂಕದಂದು ನೇಮಕವಾಗಿದ್ದು, ನಿಗದಿತ 15 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಅವರ ಜನ್ಮ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ವಯಸ್ಸಿನಲ್ಲಿ ಹಿರಿಯರಾದವರನ್ನು ಪರಿಗಣಿಸಲಾಗುತ್ತದೆ. ಈ ಆಧಾರದಲ್ಲಿ ಜ್ಯೇಷ್ಠತೆ ನಿರ್ಧರಿಸಿ ಪದೋನ್ನತಿ ನೀಡಲು ಆದೇಶ ಮಾಡಲಾಗುತ್ತದೆ.
ಸರ್ಕಾರಿ ಆದೇಶ: ಇಡಿ 52 ಟಿಪಿಯು 2002 ದಿನಾಂಕ 10-04-2002
ಸಂಖ್ಯೆ:ಪಪೂಶಿ/ಸಿಬ್ಬಂದಿ-3/ಜೆಹೆಚ್-086/ಬಡ್ತಿ/06/11-12 ದಿನಾಂಕ 20-01-2012
ಪ್ರೌಢಶಾಲಾ ವಿಭಾಗದಲ್ಲಿ ಬಡ್ತಿ ನೀಡುವಾಗ ಪ್ರೌಢ ಶಾಲಾ ಶಿಕ್ಷಕರು ಅನುದಾನ ಸಹಿತ ಅನುಮೋದನೆಗೊಂಡ ದಿನಾಂಕದಿಂದ ಜ್ಯೇಷ್ಠತಾ ಪಟ್ಟಿ ತಯಾರಿಸುವುದು ಮತ್ತು ಜನ್ಮ ದಿನಾಂಕದ ಆಧಾರದ ಮೇಲೆ ವಯಸ್ಸಿನಲ್ಲಿ ಹಿರಿಯರಾದವರನ್ನು ಬಡ್ತಿಗೆ ಪರಿಗಣಿಸಬೇಕಾಗುತ್ತದೆ.
ನಿವೃತ್ತಿಯಾಗುವ ದಿನಾಂಕದ ಆರು ತಿಂಗಳ ಮೊದಲೇ ಆಡಳಿತ ಮಂಡಳಿಯ ನಿರ್ಣಯದ ಜೊತೆಗೆ ನಿಗದಿತ ನಮೂನೆಯಲ್ಲಿ ಬಡ್ತಿ ಪ್ರಸ್ತಾಪವನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಬೇಕು. ಇದರಲ್ಲಿ ಕ್ರಮ ಅನುಸರಿಸದಿದ್ದರೆ ಸಂಬಂಧಿಸಿದ ಹುದ್ದೆಗೆ ಸಹಾಯಾನುದಾನ ನಿಲ್ಲಿಸಲು ನೋಟೀಸ್ ನೀಡಿ ಸಕ್ಷಮ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ.
ಇದನ್ನೂ ಓದಿ:
ಸರ್ಕಾರಿ ನೌಕರರಿಗೆ ಶಿಶುಪಾಲನಾ ರಜೆ: ಸರ್ಕಾರಿ ಆದೇಶದ ಪ್ರಕಾರ ಎಷ್ಟು ದಿನ ಗೊತ್ತೇ..?