Official Secrets Act : ಪೊಲೀಸ್ ಠಾಣೆ ನಿರ್ಬಂಧಿತ ಸ್ಥಳವಲ್ಲ, ಮೊಬೈಲ್ ಶೂಟಿಂಗ್ ಮಾಡಬಹುದು ಎಂದ ಬಾಂಬೆ ಹೈಕೋರ್ಟ್
ಪೊಲೀಸ್ ಠಾಣೆ ನಿರ್ಬಂಧಿತ ಸ್ಥಳವಲ್ಲ, ಮೊಬೈಲ್ ಶೂಟಿಂಗ್ ಮಾಡಬಹುದು ಎಂದ ಬಾಂಬೆ ಹೈಕೋರ್ಟ್
ಪೊಲೀಸ್ ಠಾಣೆ ನಿರ್ಬಂಧಿತ ಸ್ಥಳವಲ್ಲ. ಅಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡುವುದು ಕಾನೂನುಬಾಹಿರ ಕೃತ್ಯವಲ್ಲ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಧಿಕೃತ ರಹಸ್ಯ ಕಾಯಿದೆ 1923 (Official Secrets Act) ರ ಸೆಕ್ಷನ್ 3ರ ಪ್ರಕಾರ ನಿರ್ಬಂಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ನಡೆಸಿದ್ದರೆ ಅದು ಅಪರಾಧವಾಗುತ್ತದೆ ಎಂದು ಹೈಕೋರ್ಟ್‌ನ ನಾಗಪುರ ಪೀಠ ಅಭಿಪ್ರಾಯಪಟ್ಟಿದೆ.
ಆದರೆ, ಸದ್ರಿ ನ್ಯಾಯಪೀಠದ ಮುಂದಿರುವ ಪ್ರಕರಣದ ಪ್ರಕಾರ ಅರ್ಜಿದಾರ/ಆರೋಪಿಯು ಪೊಲೀಸ್ ಠಾಣೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಪೊಲೀಸ್ ಠಾಣೆ ಒಂದು ನಿರ್ಬಂಧಿತ ಪ್ರದೇಶವಲ್ಲ ಹಾಗಾಗಿ ಇಲ್ಲಿ ಅಧಿಕೃತ ರಹಸ್ಯ ಉಲ್ಲಂಘನೆ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತೀರ್ಪು ನೀಡಿ ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಪಡಿಸಿದೆ.
ಪ್ರಕರಣ: Ravindra Shitalrao Upadyay Vs The State Of Mah.
ಮುಂಬೈ ಹೈಕೋರ್ಟ್, CrA 615/20221 Dated: 26-07-2022
ಪ್ರಕರಣದ ವಿವರ
ಅರ್ಜಿದಾರ ರವೀಂದ್ರ ಉಪಾಧ್ಯಾಯ ಅವರು ನೆರಕರೆಯವರೊಂದಿಗೆ ತಮ್ಮಗೆ ಸೇರಿದ್ದ ಕೃಷಿ ಭೂಮಿಗೆ ಸಂಬಂಧಿಸಿದಂತೆ ತಗಾದೆಯನ್ನು ಹೊಂದಿದ್ದರು. ಪೊಲೀಸ್ ಠಾಣೆಯಲ್ಲಿ ಈ ತಗಾದೆಯ ಕುರಿತು ದೂರು ನೀಡಲಾದ ಸಂದರ್ಭದಲ್ಲಿ ಅರ್ಜಿದಾರರು ರಹಸ್ಯವಾಗಿ ವೀಡಿಯೊ ರೆಕಾರ್ಡಿಂಗ್ ಮಾಡಿದ್ದಾರೆ ಎಂಬುದು ಠಾಣಾಧಿಕಾರಿಯ ಆರೋಪ.
ಹಾಗೆ, ದೃಶ್ಯ ಚಿತ್ರೀಕರಿಸುವ ಸಂದರ್ಭದಲ್ಲಿ ಅವರು ಅಧಿಕೃತ ರಹಸ್ಯ ಕಾಯಿದೆ 1923 ರ ಸೆಕ್ಷನ್ 3 ರಡಿ ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ತನಿಖೆ ಪೂರ್ಣಗೊಳಿಸಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನು ಪ್ರಶ್ನಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ರದ್ದುಗೊಳಿಸುವಂತೆ ಆರೋಪಿಯಾಗಿರುವ ಅರ್ಜಿದಾರ ರವೀಂದ್ರ ಹೈಕೋರ್ಟ್ ಮೊರೆ ಹೋಗಿದ್ದರು.
ಅಧಿಕೃತ ರಹಸ್ಯ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕಾದರೆ, ಒಬ್ಬ ವ್ಯಕ್ತಿ ನಿರ್ಬಂಧಿತ ಸ್ಥಳದ ದೃಶ್ಯಚಿತ್ರಗಳನ್ನು ಚಿತ್ರೀಕರಿಸುವುದು ಅಥವಾ ಆ ದೃಶ್ಯ ರೆಕಾರ್ಡ್ ಮಾಡುವ ಮೂಲಕ ದೇಶದ ಶತ್ರುಗಳಿಗೆ ಲಾಭವಾಗುವಂತಿದ್ದರೆ ಅದನ್ನು ಈ ಸೆಕ್ಷನ್ ನಡಿಯಲ್ಲಿ ದಾಖಲಿಸಬಹುದು.
ಆದರೆ, ಸದ್ರಿ ಪ್ರಕರಣದಲ್ಲಿ, ಪೊಲೀಸರು ಅಭಿಯೋಜನೆಯ ಮುಂದೆ ನೀಡಿರುವ ಸಾಕ್ಷ್ಯವನ್ನು ಪರಿಶೀಲಿಸಿದರೆ ಆ ಕೃತ್ಯ ನಡೆದಂತೆ ಕಾಣುವುದಿಲ್ಲ. ಅಷ್ಟಕ್ಕೂ ಪೊಲೀಸ್ ಠಾಣೆ ನಿರ್ಬಂಧಿತ ಸ್ಥಳವಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ಅನ್ನು ವಜಾಗೊಳಿಸಿತು.
The Nagpur Bench of the Bombay High Court has acquitted a Wardha resident who made a video on his mobile during the action in the police station.
Petitioner Ravindra Upadhyay was having a dispute with a resident of his own area over agricultural land. The petitioner was alleged to have secretly made video recordings during the same action at the police station. In such a situation, the police registered a case against him under Section 3 of the Official Secrets Act 1923.
In this case, the police completed the investigation and filed a charge sheet against the petitioner. The petitioner had approached the High Court to quash the FIR and the chargesheet.
While dismissing the FIR against the petitioner, the High Court said that, a case can be registered under Section 3 of the Official Secrets Act, when a person is benefiting the enemy of the country by taking out pictures or pictures of a restricted place, but in this case It doesn't seem like anything. Police station is not a restricted place. Court after hearing all the parties in the matter
ತೀರ್ಪಿನ ಪ್ರತಿ
ಪ್ರಕರಣ: Ravindra Shitalrao Upadyay Vs The State Of Mah.