RBI Guidelines for recovery Agencies- ಸಾಲ ವಸೂಲಿ ವೇಳೆ ಬೆದರಿಕೆ, ಕಿರುಕುಳ ನೀಡುವಂತಿಲ್ಲ: ರಿಕವರಿ ಏಜೆನ್ಸಿಗಳಿಗೆ RBI ಹೊಸ ಮಾರ್ಗಸೂಚಿ
ಸಾಲ ವಸೂಲಿ ವೇಳೆ ಬೆದರಿಕೆ, ಕಿರುಕುಳ ನೀಡುವಂತಿಲ್ಲ: ರಿಕವರಿ ಏಜೆನ್ಸಿಗಳಿಗೆ RBI ಹೊಸ ಮಾರ್ಗಸೂಚಿ
- RBI ಹೊಸ ಮಾರ್ಗಸೂಚಿ: ಸಾಲಗಾರರು ಇನ್ನು ನಿರಾಳ?
- ಗ್ರಾಹಕರೊಂದಿಗೆ ರಿಕವರಿ ಏಜೆನ್ಸಿ ಬೇಕಾಬಿಟ್ಟಿ ವರ್ತನೆಗೆ ಬ್ರೇಕ್!
- ಅನುಚಿತ ವರ್ತನೆ ತೋರಿದರೆ ಕಠಿಣ ಕ್ರಮದ ಎಚ್ಚರಿಕೆ
- ನಿಂದನೆ, ಮಾನಸಿಕ - ದೈಹಿಕ ಕಿರುಕುಳ ಸಲ್ಲದು
- ಬೆಳಿಗ್ಗೆ 8ರನಂತರ, ರಾತ್ರಿ 7ರ ಬಳಿಕ ರಿಕವರಿಗೆ ಹೋಗಬಾರದು
ಇನ್ನು ಮುಂದೆ, ಸಾಲದ ವಸೂಲಾತಿ ಸಂದರ್ಭದಲ್ಲಿ ಗ್ರಾಹಕರಿಗೆ ಅನಗತ್ಯ ಕಿರುಕುಳ ಕೊಡುವಂತಿಲ್ಲ. ರಿಕವರಿ ಏಜೆನ್ಸಿಗಳ ಬೇಕಾಬಿಟ್ಟಿ ವರ್ತನೆಗೆ ರಿಸರ್ವ್ ಬ್ಯಾಂಕ್ (RBI) ಬ್ರೇಕ್ ಹಾಕಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ರಿಕವರಿ ಏಜೆಂಟರು ಗ್ರಾಹಕರಿಗೆ ಬೆದರಿಕೆ ಹಾಕುವುದು, ಮಾನಸಿಕ ಯಾ ದೈಹಿಕ ಕಿರುಕುಳ ಕೊಡುವಂತಿಲ್ಲ. ಮುಂಜಾನೆ 8 ಗಂಟೆಯಿಂದ ಮೊದಲು ಹಾಗೂ ರಾತ್ರಿ 7 ಗಂಟೆಯ ಬಳಿಕ ಫೋನ್ ಮಾಡುವಂತಿಲ್ಲ. ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ತನ್ನ ಮಾರ್ಗಸೂಚಿಯನ್ನು ಒಳಗೊಂಡ ಹೊಸ ಸುತ್ತೋಲೆಯನ್ನು RBI ಬಿಡುಗಡೆ ಮಾಡಿದ್ದು, ಬ್ಯಾಂಕ್‌ಗಳು, ಬ್ಯಾಂಕೇತರ ಫೈನಾನ್ಸ್ ಕಂಪೆನಿಗಳು ಮತ್ತು ಎಆರ್‌ಸಿಗಳು ಸೇರಿದಂತೆ ನಿಯಂತ್ರಿತ ಘಟಕಗಳಿಗೆ ಈ ಮಾರ್ಗಸೂಚಿ ಅನ್ವಯವಾಗುತ್ತದೆ.
ಸಾಲ ವಸೂಲೂ ಮಾಡುವ ಸಂದರ್ಭದಲ್ಲಿ ವಸೂಲಾತಿ ಏಜೆನ್ಸಿಗಳು ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವರ್ತನೆ ತೋರುವುದು ಗಮನಕ್ಕೆ ಬಂದಿದೆ ಎಂದು RBI ಹೇಳಿದೆ.
ಸಾಲ ವಸೂಲಿ ವೇಳೆ, ಸಾಲಕ್ಕೆ ಸಂಬಂಧಿಸಿದ ಸಂಸ್ಥೆ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವ ಕ್ರಮ ಅನುಸರಿಸುವಂತಿಲ್ಲ. ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಫೋನ್ ಮಾಡುವಂತಿಲ್ಲ ಎಂದು RBI ಸುತ್ತೋಲೆ ಸ್ಪಷ್ಟಪಡಿಸಿದೆ.
ಗ್ರಾಹಕರೊಂದಿಗೆ ವಸೂಲಾತಿ ಏಜನ್ಸಿಗಳು ಸರಿಯಾಗಿ ನಡೆದುಕೊಳ್ಳಬೇಕು. ಗ್ರಾಹಕರ ಜೊತೆಗೆ ಅನುಚಿತ ವರ್ತನೆ ತೋರುವುದು ಸರಿಯಲ್ಲ. ಸರಿಯಾದ ರೀತಿಯಲ್ಲಿ ಸಾಲ ವಸೂಲಾತಿ ಮಾಡಬೇಕು. ನಿಂದನೆ ಮಾಡುವುದು, ಮಾನಸಿಕ ಯಾ ದೈಹಿಕ ಕಿರುಕುಳ ನೀಡಿದರೆ, ದೂರುಗಳು ದಾಖಲಾದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು RBI ಹೇಳಿದೆ.