-->
ವಿವಿಧ ಅಂಶಗಳನ್ನು ಪರಿಗಣಿಸಿ ಸಾಕ್ಷ್ಯದ ಮರುಮೌಲ್ಯಮಾಪನ ಅಧಿಕಾರ ನ್ಯಾಯಾಲಯಕ್ಕಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಿಧ ಅಂಶಗಳನ್ನು ಪರಿಗಣಿಸಿ ಸಾಕ್ಷ್ಯದ ಮರುಮೌಲ್ಯಮಾಪನ ಅಧಿಕಾರ ನ್ಯಾಯಾಲಯಕ್ಕಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಿಧ ಅಂಶಗಳನ್ನು ಪರಿಗಣಿಸಿ ಸಾಕ್ಷ್ಯ ಮರುಮೌಲ್ಯಮಾಪನ ಅಧಿಕಾರ ನ್ಯಾಯಾಲಯಕ್ಕಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಸ್ವಾಭಾವಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಕಂಡುಬಂದರೆ ಅಂತಹ ಸಂದರ್ಭದಲ್ಲಿ ಸಾಕ್ಷ್ಯದ ದಾಖಲೀಕರಣದ ತಪ್ಪನ್ನು ತಿದ್ದುವ ಹಾಗೂ ಸಾಕ್ಷ್ಯವನ್ನು ಅರ್ಥೈಸಿಕೊಳ್ಳುವ ಯಾ ವಿಕೃತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯವನ್ನು ಮರುಮೌಲ್ಯಮಾಪನ ಮಾಡಲು ನ್ಯಾಯಾಲಯವು ಶಕ್ತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.


ಪ್ರಕರಣ: Khema @ Khem Chandra ETC V. State of Uttar Pradesh

ಸುಪ್ರೀಂ ಕೋರ್ಟ್, Cr A 1200/2022 Dated 10-08-2022


ಖೇಮಾ @ ಖೇಮ್ ಚಂದ್ರ ಇಟಿಸಿ Vs ಉತ್ತರ ಪ್ರದೇಶದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಪಮಿಡಿಘಂಟಂ ಶ್ರೀ ನರಸಿಂಹ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.



ಸಾಕ್ಷ್ಯದ ದಾಖಲೀಕರಣದಲ್ಲಿ ಮೌಲ್ಯಮಾಪನದ ಪ್ರಶಂಸೆಯಲ್ಲಿ ತೊಡಕಾಗಿದೆ ಎಂದು ನ್ಯಾಯಾಲಯ ಕಂಡುಕೊಂಡರೆ ಮತ್ತು ಅಂತಹ ಸಾಕ್ಷ್ಯ ದಾಖಲೀಕರಣದಿಂದ ಸ್ವಾಭಾವಿಕ ನ್ಯಾಯದಾನದ ತತ್ವಗಳಿಗೆ ಧಕ್ಕೆಯಾಗಿದೆ ಎಂದು ಕಂಡುಬಂದಲ್ಲಿ, ಮರುಮೌಲ್ಯಮಾಪನ ಮಾಡಲು ಯಾವುದೇ ತೊಡಕಿಲ್ಲ.



ಅದೇ ರೀತಿ, ದಾಖಲೆಯ ದೋಷ, ಸಾಕ್ಷ್ಯವನ್ನು ತಪ್ಪಾಗಿ ಅರ್ಥೈಸಿಕೊಂಡದ್ದು ಮತ್ತು ಹೈಕೋರ್ಟ್ ತೀರ್ಪುಗಳ ಅಭಿಪ್ರಾಯವನ್ನು ವಿಕೃತಿಗೊಳಿಸಿದ್ದಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ಸಾಕ್ಷ್ಯದ ಮರುಮೌಲ್ಯಮಾಪನಕ್ಕೆ ಮುಂದಾಗಲು ಯಾವುದೇ ಅಡ್ಡಿ ಇರಲಾರದು ಎಂದು ನ್ಯಾಯಪೀಠ ಹೇಳಿದೆ.


ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಹತ್ವದ ಪ್ರಕರಣಗಳನ್ನು ಉದ್ದರಿಸಿದೆ. ಅವುಗಳೆಂದರೆ,

Himachal Pradesh Administration v. Shri Om Prakash

Arunachalam v. P.S.R. Sadhanantham and Another

Mithilesh Kumari and Another v. Prem Behari Khare

State of U.P. v. Babul Nath

Pattakkal Kunhikoya (Dead) By LRs. v. Thoopiyakkal Koya and Another


ಮತ್ತು


ಪ್ರಸ್ತುತ ಪ್ರಕರಣದಲ್ಲಿ, ಪ್ರಾಸಿಕ್ಯೂಷನ್ ಸಾಕ್ಷಿಗಳ ಸಾಕ್ಷ್ಯದಲ್ಲಿನ ಪ್ರಮುಖ ವ್ಯತ್ಯಾಸಗಳು ಮತ್ತು ಅಸಂಗತತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ವಿಫಲವಾಗಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತು ಮತ್ತು ಮೇಲ್ಮನವಿಯನ್ನು ಪುರಸ್ಕರಿಸಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿತು.


ತೀರ್ಪಿನ ಪ್ರತಿ:

Khema @ Khem Chandra ETC V. State of Uttar Pradesh


Ads on article

Advertise in articles 1

advertising articles 2

Advertise under the article