Stamp Duty Payment: ಸ್ಟ್ಯಾಂಪ್ ಡ್ಯೂಟಿ ಪಾವತಿ - ಬದಲಾದ ನ್ಯಾಯಾಲಯದ K 2 ಲೆಕ್ಕ ಶೀರ್ಷಿಕೆ
ಸ್ಟ್ಯಾಂಪ್ ಡ್ಯೂಟಿ ಪಾವತಿ - ಬದಲಾದ ನ್ಯಾಯಾಲಯದ K 2 ಲೆಕ್ಕ ಶೀರ್ಷಿಕೆ
ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯಡಿ ನ್ಯಾಯಾಲಯವು ಪಾವತಿಸಲು ಆದೇಶಿಸಿದ ಸ್ಟಾಂಪ್ ಡ್ಯೂಟಿ ಅಂಡ್ ಪೆನಾಲ್ಟಿ, ಹಾಗೂ ಆರ್ಬಿಟೇಶನ್ ಅವಾರ್ಡ್, ಸೇಲ್ ಸರ್ಟಿಫಿಕೇಟ್, ನ್ಯಾಯಾಲಯದ ವಿಭಾಗ ಪತ್ರ ಮುಂತಾದ ದಾಖಲೆಗಳ ಮೇಲೆ ಪಾವತಿಸಬೇಕಾದ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಶುಲ್ಕವನ್ನು K 2 ಚಲನ್ ಮೂಲಕ ಇದು ವರೆಗೂ ಈ ಕೆಳಗಿನ ನ್ಯಾಯಾಲಯದ ಲೆಕ್ಕ ಶೀರ್ಷಿಕೆಗೆ ಪಾವತಿಸಲಾಗುತ್ತಿತ್ತು.
0030-02-102-0-01
ಆದರೆ ದಿನಾಂಕ 11.8.2022 ರಂದು ರಾಜ್ಯದ ಎಲ್ಲಾ ಡಿ. ಡಿ. ಒ. ರವರಿಗೆ ನೀಡಿದ ಸೂಚನೆ ಪ್ರಕಾರ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಬಾಬ್ತು K2 ಚಲನ್ ಮೂಲಕ ಪಾವತಿಸಬೇಕಾದ ನ್ಯಾಯಾಲಯದ ಲೆಕ್ಕ ಶೀರ್ಷಿಕೆ ಈ ಕೆಳಗಿನಂತಿದೆ.
0070-01-102-0-01
ಮೇಲ್ಕಾಣಿಸಿದ ಲೆಕ್ಕ ಶೀರ್ಷಿಕೆ ಈ ಕೆಳಗಿನ ಉಪ ಉದ್ದೇಶಗಳಿಗೆ ಸಂಬಂಧಪಟ್ಟ K2 ಚಲನ್ ಪಾವತಿಗಳಿಗೆ ಸಂಬಂಧಪಟ್ಟದ್ದಾಗಿದೆ.
1. Court order-Duty/ Stamp Duty/Duty and Penalty.
2. Court order -Deficit Stamp Duty.
3. Court order -Revenue stamp fee.
4. Court order -Receipts on non judicial stamp.
5.Court order - others
ಮಾಹಿತಿ : ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು