ಕೊರೋನಾ ಲಸಿಕೆ ಸೈಡ್ ಎಫೆಕ್ಟ್‌ನಿಂದ ಮೃತ್ಯು: ತುರ್ತು ಪರಿಹಾರಕ್ಕೆ ಯೋಜನೆ- ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೋಟೀಸ್
ಕೊರೋನಾ ಲಸಿಕೆ ಸೈಡ್ ಎಫೆಕ್ಟ್‌ನಿಂದ ಮೃತ್ಯು: ತುರ್ತು ಪರಿಹಾರಕ್ಕೆ ಯೋಜನೆ- ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೋಟೀಸ್
ಕೊರೋನಾ ಲಸಿಕೆಯಿಂದ ಉಂಟಾದ ಸೈಡ್ ಎಫೆಕ್ಟ್ ಹಾಗೂ ಅದರ ಪರಿಣಾಮದಿಂದ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಿಸಲು ತುರ್ತಾಗಿ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣ: ಸಯೀದಾ ಕೆ ಎ Vs ಭಾರತ ಸರ್ಕಾರ (ಕೇರಳ ಹೈಕೋರ್ಟ್)
ನಾಗರಿಕ ಸಮಾಜ ಎದುರಿಸುತ್ತಿರುವ ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಪರಿಹಾರ ಒದಗಿಸುವುದನ್ನು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಅಭಿಪ್ರಾಯಪಟ್ಟಿದ್ದಾರೆ.
"ಪ್ರಸ್ತುತ ಈ ಸಮಸ್ಯೆ ಈಗ ನಾವು ಎದುರಿಸಿದ ರಾಷ್ಟ್ರೀಯ ವಿಪತ್ತು ಎಂದೇ ಪರಿಗಣಿಸಬಹುದು. ಸದ್ರಿ ಪ್ರಕರಣ ಅತ್ಯಂತ ನೈಜವಾದುದಾಗಿದೆ. ಅದನ್ನು ತಕ್ಷಣ ಇತ್ಯರ್ಥ ಮಾಡಬೇಕಿದೆ. ದೇಶದ ವಿವಿಧ ಭಾಗಗಳಲ್ಲೂ ಈ ರೀತಿಯ ಸಮಸ್ಯೆಗಳು ಕಂಡುಬಂದಿವೆ. ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರ ನೀಡಲು ಸೂಕ್ತ ಮಾರ್ಗಸೂಚಿ ಮತ್ತು ಸರಿಯಾದ ಯೋಜನೆ ರೂಪಿಸುವ ಅಗತ್ಯವಿದೆ. ಯಾಂತ್ರಿಕವಾಗಿ ಆದೇಶ ನೀಡುವ ಬದಲು ತರ್ಕಬದ್ಧ ತೀರ್ಪು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆಯಲ್ಲಿ ನೀಡಲಿ. ಇದು ತಮಾಷೆಯ ವಿಷಯವಲ್ಲ, ಇದನ್ನು ನಾನು ಅತ್ಯಂತ ಗಂಭೀರ ವಿಷಯವಾಗಿ ಪರಿಗಣಿಸುತ್ತೇನೆ" ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಹೇಳಿದರು.
ಸಂತ್ರಸ್ತರು ಕುಟುಂಬದ ಆಧಾರವಾಗಿದ್ದವರು. ಅವರ ಸಾವಿವ ಕಾರಣ ಅವರನ್ನು ಅವಲಂಬಿಸಿದ್ದ ಕುಟುಂಬ ತೀವ್ರ ತೊಂದರೆ ಎದುರಿಸುತ್ತಿದೆ. ಅವರಿಗೆ ಪರಿಹಾರ ಪ್ರಕ್ರಿಯೆ ತ್ವರಿತವಾಗಿ ಆಗಬೇಕಿದೆ ಎಂಬ ಅರ್ಜಿದಾರರು ವಾದಿಸಿದ್ದರು.