ವಿಶಾಕಾ ಮಾರ್ಗಸೂಚಿ: ದುಡಿಯುವ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ವಿರುದ್ಧದ ಐತಿಹಾಸಿಕ ತೀರ್ಪಿನ ಕುರಿತು ಟಿಪ್ಪಣಿ
ವಿಶಾಕಾ ಮಾರ್ಗಸೂಚಿ: ದುಡಿಯುವ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ವಿರುದ್ಧದ ಐತಿಹಾಸಿಕ ತೀರ್ಪಿನ ಕುರಿತು ಟಿಪ್ಪಣಿ
Vishakha and others v State of Rajasthan
1997ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಮೈಲುಗಲ್ಲಾದ ತೀರ್ಪುಗಳಲ್ಲಿ ಒಂದು ವಿಶಾಖ ಮತ್ತಿತರರು Vs ರಾಜಸ್ತಾನ ಪ್ರಕರಣ. ಈ ತೀರ್ಪು ವಿಶಾಖ ಗೈಡ್‌ಲೈನ್ಸ್ ಅಥವಾ ವಿಶಾಖ ಮಾರ್ಗಸೂಚಿ ಎಂದೇ ಜನಜನಿತವಾಗಿದೆ.
ನೈನಾ ಕಪೂರ್ ನೇತೃತ್ವದ ವಿವಿಧ ಮಹಿಳಾ ಸಂಘಟನೆಗಳು ರಾಜಸ್ತಾನ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿತು.
ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ. ಬಾಲ್ಯವಿವಾಹವನ್ನು ತಡೆದ ಕಾರಣಕ್ಕೆ ರಾಜಸ್ತಾನದ ಸಾಮಾಜಿಕ ಕಾರ್ಯಕರ್ತೆ ಭನ್ವಾರಿ ದೇವಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪರಿಣಾಮವಾಗಿ ಈ PIL ಅರ್ಜಿ ಸಲ್ಲಿಸಲಾಗಿತ್ತು.
ಸಂವಿಧಾನದ 14, 15, 19 (1) (ಜಿ) ಮತ್ತು 21 ನೇ ವಿಧಿಗಳಲ್ಲಿ ಲಿಂಗ ಸಮಾನತೆ, ಮಾನವ ಘನತೆಯಿಂದ ಕೆಲಸ ಮಾಡುವ ಹಕ್ಕುಗಳ ಖಾತರಿಯ ವ್ಯಾಖ್ಯಾನದ ಉದ್ದೇಶಕ್ಕಾಗಿ "ಅಂತಾರಾಷ್ಟ್ರೀಯ ಸಮಾವೇಶಗಳು ಮತ್ತು ಮಾನದಂಡಗಳ ಪರಿಗಣಿಸಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದಾಗಿದೆ.
ಲೈಂಗಿಕ ಕಿರುಕುಳದ ವಿರುದ್ಧದ ರಕ್ಷಣೆಗಳನ್ನು ತೀರ್ಪಿನಲ್ಲಿ ಪರಿಣಾಮಕಾರಿಯಾಗಿ ವಿವರಿಸಲಾಗಿದೆ. ಇದೇ ಈಗ "ವಿಶಾಕ ಮಾರ್ಗಸೂಚಿ" ಎಂದು ಜನಪ್ರಿಯವಾದ ಗೈಡ್‌ಲೈನ್ಸ್‌ಗೆ ಮುನ್ನುಡಿ ಬರೆಯಿತು.
1997ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಲೈಂಗಿಕ ಕಿರುಕುಳದ ಬಗ್ಗೆ ದೂರುಗಳನ್ನು ವ್ಯವಹರಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿಷದವಾಗಿ ಹೇಳಿತು.
ದುಡಿಯುವ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ರೂಪಿಸಲಾದ "ವಿಶಾಖ ಮಾರ್ಗಸೂಚಿ" ಇಂತಹ ಪ್ರಕರಣಗಳನ್ನು ಬಗೆಹರಿಸಲು ಪರಿಣಾಮಕಾರಿ ಕಾನೂನು ಅಂಗೀಕರಿಸುವವರೆಗೆ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ತೀರ್ಪಿನಲ್ಲಿ ಸೂಚಿಸಿದೆ.
ಇದರ ಪರಿಣಾಮವಾಗಿ, 23 ಏಪ್ರಿಲ್ 2013ರಂದು ದುಡಿಯುವ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ("ಲೈಂಗಿಕ ಕಿರುಕುಳ ಕಾಯಿದೆ") ಅಸ್ತಿತ್ವಕ್ಕೆ ಬಂದಿತು.
ಸಂಕ್ಷಿಪ್ತ ವಿವರ:
ನ್ಯಾಯಾಲಯ: Supreme Court of India
ಪ್ರಕರಣ: Vishaka and Ors. v. State of Rajasthan and Ors.
ತೀರ್ಪಿನ ದಿನ: 13 August 1997
ಸೈಟೇಷನ್: AIR 1997 SC 3011
ನ್ಯಾಯಮೂರ್ತಿಗಳು: J.S. Verma (Chief Justice), Sujata V. Manohar, B.N. Kirpal
ಈ ತೀರ್ಪಿನ ಪರಿಣಾಮವಾಗಿ ದುಡಿಯುವ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ("ಲೈಂಗಿಕ ಕಿರುಕುಳ ಕಾಯಿದೆ") ಎಂಬ ಕಾನೂನು 2013ರ ಏಪ್ರಿಲ್ ನಲ್ಲಿ ಜಾರಿಗೆ ಬಂದಿತು.
ಮಾಹಿತಿ: SKS, ವಕೀಲರು (Feedback, if any, please feel free to write on us: courtbeatnews@gmail.com)