ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಾನೂನು ಅಧಿಕಾರಿ ಹುದ್ದೆಗೆ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆ ಹೊರಗುತ್ತಿಗೆ ಆಧಾರದಲ್ಲಿ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.
ನ್ಯಾಯಾಲಯಕ್ಕೆ ಸಂಬಂಧಪಟ್ಟ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಇಲಾಖೆಯ ಪ್ರಕರಣಗಳನ್ನು ವಿಚಾರಣೆಯ ದಿನಾಂಕಕ್ಕೂ ಮೊದಲು ಸರ್ಕಾರಿ ವಕೀಲರನ್ನು ಸಂಪರ್ಕಿಸಿ ಸರಿಯಾದ ಸಮಯದಲ್ಲಿ ನ್ಯಾಯಾಲಯ ಕೋರುವ ಮಾಹಿತಿ ಯಾ ದಾಖಲೆಯನ್ನು ಆಂಗ್ಲ ಭಾಷೆಯಲ್ಲಿ ರಚಿಸಿ ನೀಡುವ ಜವಾಬ್ದಾರಿ ಈ ಮೇಲ್ಕಂಡ ಹುದ್ದೆಗೆ ನಿಯುಕ್ತರಾಗುವ ವಕೀಲರಿಗೆ ಇರುತ್ತದೆ.
ಗೌರವಧನ: 30,000/-
ಮಹಿಳಾ ನ್ಯಾಯವಾದಿಗಳಿಗೆ ಆದ್ಯತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2022 ಸಂಜೆ 5-00 ಗಂಟೆಯ ಒಳಗೆ
ಅರ್ಜಿ ಫಾರಂಗಳನ್ನು ಈ ಕೆಳಗಿನ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
dwcd.karnataka.gov.in
Phone Number: 08022353778
ವಿಳಾಸ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬಹುಮಹಡಿ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ,
ಬೆಂಗಳೂರು - 560 001