ಅನುಕಂಪದ ನೇಮಕಾತಿ: ವಿದ್ಯಾರ್ಹತೆ ಪ್ರಕಾರ ಗ್ರೂಪ್ 'ಸಿ' ಯಾ 'ಡಿ' ಹುದ್ದೆಗೆ ನೇಮಕಾತಿ- 2017ರ ಸುತ್ತೋಲೆ ಏನು ಹೇಳುತ್ತದೆ...?
ಅನುಕಂಪದ ನೇಮಕಾತಿ: ವಿದ್ಯಾರ್ಹತೆ ಪ್ರಕಾರ ಗ್ರೂಪ್ 'ಸಿ' ಯಾ 'ಡಿ' ಹುದ್ದೆಗೆ ನೇಮಕಾತಿ- 2017ರ ಸುತ್ತೋಲೆ ಏನು ಹೇಳುತ್ತದೆ...?
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ 1996 ಅನುಕಂಪದ ಮೇರೆಗೆ ನೇಮಕವಾಗುವ ಸಂದರ್ಭದಲ್ಲಿ ಅರ್ಜಿದಾರರ ವಿದ್ಯಾರ್ಹತೆಯನ್ನು ಗಮನದಲ್ಲಿ ಇಟ್ಟುಕೊಂಡು ನೇಮಕಾತಿ ಮಾಡಲು ಆದೇಶ ಹೊರಡಿಸಬೇಕು ಎಂದು 27-10-2017ರ ಸುತ್ತೋಲೆ ಹೇಳುತ್ತದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿದ ಈ ಸುತ್ತೋಲೆಯಲ್ಲಿ ಸಕ್ಷಮ ಪ್ರಾಧಿಕಾರಿಗಳಿಗೆ ಅನುಕಂಪದ ಆಧಾರದ ನೇಮಕಾತಿ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.
ಈ ಸುತ್ತೋಲೆ ಹೇಳುವ ಪ್ರಕಾರ,
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ (ಅನುಕಂಪದ ಆಧಾರದ ಮೇಲೆ ನೇಮಕಾರಿ) 1996 ರ ನಿಯಮಗಳು ಇದರ ಅನ್ವಯ, ಸರಕಾರಿ ನೌಕರರು ಸೇವೆಯಲ್ಲಿ ಇರುವಾಗಲೇ ಮೃತಪಟ್ಟರೆ, ಈ ನೌಕರನ ಅವಲಂಬಿತರಲ್ಲಿ ಅರ್ಹರಾದ ಒಬ್ಬರಿಗೆ, ನಿಯಮಗಳಲ್ಲಿ ನಿಗದಿಪಡಿಸುವ ಶರತ್ತು ಮತ್ತು ನಿಬಂಧನೆಗಳನ್ನು ಪೂರೈಸಿದರೆ, ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬಹುದಾಗಿದೆ.
ಈ ನಿಯಮಗಳ ನಿಯಮ ನಾಲ್ಕರಲ್ಲಿ ಅನುಕಂಪದ ಆಧಾರದ ನೇಮಕಾತಿಗೆ ಶರತುಗಳನ್ನು ವಿಧಿಸಲಾಗಿದೆ.
ಅನುಕಂಪದ ಆಧಾರದ ನೇಮಕಾತಿಯನ್ನು ಸರಕಾರವು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂತಹ ಹುದ್ದೆಗಳನ್ನು ಹೊರತುಪಡಿಸಿ ಕರ್ನಾಟಕ ಸರಕಾರದ ಸಚಿವಾಲಯದ ಸಹಾಯಕ ವೃಂದದ ವೇತನ ಶ್ರೇಣಿಯನ್ನು ಮೀರದ, ಗರಿಷ್ಠ ಗ್ರೂಪ್ ಸಿ ಹುದ್ದೆ, ಕನಿಷ್ಠ ಗ್ರೂಪ್ ಡಿ ಹುದ್ದೆಗೆ ಅರ್ಜಿದಾರರ ವಿದ್ಯಾರ್ಹತೆ ಅನುಸಾರವಾಗಿ ಮಾಡಬಹುದಾಗಿದೆ.
ಅದರಂತೆ ಗ್ರೂಪ್ ಡಿ ಹುದ್ದೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯನ್ನು ನಿಗದಿಪಡಿಸಲಾಗಿದೆ.
ಗ್ರೂಪ್ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ /ಕಿರಿಯ ಸಹಾಯಕರ ಹುದ್ದೆಗೆ ಪದವಿಪೂರ್ವ ಹಾಗೂ ತತ್ಸಮಾನ ವಿದ್ಯಾರ್ಹತೆ, ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಆದರೆ, ಗ್ರೂಪ್ ಡಿ ಹುದ್ದೆಗೆ SSLC ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದರೂ 1996 ನಿಯಮಗಳ ನಿಯಮ 4(3)ರ ಪರಂತುಕದನ್ವಯ ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸುವಲ್ಲಿ ಮಾತ್ರ ಗ್ರೂಪ್ ಡಿ ಹುದ್ದೆಯ ವಿದ್ಯಾರ್ಹತೆಗೆ ವಿನಾಯಿತಿಯನ್ನು ನೀಡಲಾಗಿದೆ.
ಸರಕಾರದ ಇಲಾಖೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತುತ ಹಲವು ಪ್ರಕರಣಗಳಲ್ಲಿ ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರು ಉನ್ನತ ವಿದ್ಯಾರ್ಹತೆಯನ್ನು ಹೊಂದಿದ್ದರೂ, ಅಥವಾ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಒಂದು ವರ್ಷದ ಅವಧಿ ಒಳಗೆ ನಿಗದಿತ ವಿದ್ಯಾರ್ಹತೆ ಪಡೆದಿದ್ದರೂ ಸಹ ಗ್ರೂಪ್ ಸಿ ವೃಂದದ ಹುದ್ದೆಗೆ ನೇಮಕಾತಿ ನೀಡದೆ ಗ್ರೂಪ್ ಡಿ ವೃಂದದ ಹುದ್ದೆಗೆ ನೇಮಕಾತಿ ನೀಡಿ ಆದೇಶ ಹೊರಡಿಸಿರುವ ಕೆಲವು ಪ್ರಕರಣಗಳು ಸರಕಾರದ ಗಮನಕ್ಕೆ ಬಂದಿರುತ್ತದೆ.
ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸಿರುವ ಅರ್ಜಿದಾರರ ಅರ್ಜಿಯನ್ನು ಪರಿಗಣಿಸುವಲ್ಲಿ ಮೇಲೆ ತಿಳಿಸಿರುವಂತೆ ಅವರುಗಳು ಹೊಂದಿರುವ ವಿದ್ಯಾರ್ಹತೆಗೆ ಅನುಸಾರವಾಗಿಯೇ ಗ್ರೂಪ್ ಸಿ ಅಥವಾ ಗ್ರೂಪ್ ಡಿ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಬೇಕಾಗುತ್ತದೆ.
ಅನುಕಂಪದ ಆಧಾರದ ನೇಮಕಾತಿಯನ್ನು ಮಾಡುವ ಎಲ್ಲಾ ಸಕ್ಷಮ ಪ್ರಾಧಿಕಾರಗಳು ಈ ಅಂಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ.
For Circular, Click herebelow;
ವಿದ್ಯಾರ್ಹತೆ ಪ್ರಕಾರ ಗ್ರೂಪ್ 'ಸಿ' ಯಾ 'ಡಿ' ಹುದ್ದೆಗೆ ನೇಮಕಾತಿ- 2017ರ ಸುತ್ತೋಲೆ