-->
NI Act Sec 138, 141: ಕಂಪೆನಿ ನಿರ್ದೇಶಕರ ಹೊಣೆಗಾರಿಕೆಯ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

NI Act Sec 138, 141: ಕಂಪೆನಿ ನಿರ್ದೇಶಕರ ಹೊಣೆಗಾರಿಕೆಯ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

NI Act Sec 138, 141: ಕಂಪೆನಿ ನಿರ್ದೇಶಕರ ಹೊಣೆಗಾರಿಕೆಯ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು






ಹೊಣೆಗಾರಿಕೆಯು ಕಂಪನಿಯ ವ್ಯವಹಾರಗಳಲ್ಲಿ ನಿರ್ದೇಶಕರ ಪಾತ್ರವನ್ನು ಅವಲಂಬಿಸಿರುತ್ತದೆಯೇ ಹೊರತು ಅವರು ನಿರ್ವಹಿಸುವ ಹುದ್ದೆಯ ಮೇಲೆ ಅಲ್ಲ: ಸುಪ್ರೀಂ ಕೋರ್ಟ್‌



ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ಮತ್ತು 141 ಅಡಿಯಲ್ಲಿನ ಹೊಣೆಗಾರಿಕೆಯು ಕಂಪನಿಯ ವ್ಯವಹಾರಗಳಲ್ಲಿ ನಿರ್ದೇಶಕರು ವಹಿಸುವ ಪಾತ್ರವನ್ನು ಅವಲಂಬಿಸಿರುತ್ತದೆ ಮತ್ತು ಕೇವಲ ಹುದ್ದೆಯ ಮೇಲೆ ಅಲ್ಲ ಎಂದು ಚೆಕ್ ಅವಮಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ.



"ಬಾಧ್ಯತೆಯು ಕಂಪನಿಯ ವ್ಯವಹಾರಗಳಲ್ಲಿ ಒಬ್ಬರು ವಹಿಸುವ ಪಾತ್ರವನ್ನು ಅವಲಂಬಿಸಿರುತ್ತದೆಯೇ ಹೊರತು ಅವರು ಹೊಂದಿರುವ ಹುದ್ದೆ ಯಾ ಪದನಾಮದಿಂದ ಅಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.



ಪ್ರಕರಣ: SUNITA PALITA & OTHERS Vs M/S PANCHAMI STONE QUARRY

ಸುಪ್ರೀಂ ಕೋರ್ಟ್ Dated: AUGUST 01, 2022


S.M.S. Pharmaceuticals Ltd. v. Neeta Bhalla ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉದ್ಧರಿಸಿದ ನ್ಯಾಯಪೀಠ, ನಿರ್ದೇಶಕರು (ಸಿಬ್ಬಂದಿ), ನಿರ್ದೇಶಕರು (HR Dept) ಮೊದಲಾದ ವ್ಯಕ್ತಿಗಳನ್ನು ತಮ್ಮ ಹುದ್ದೆ ಯಾ ಪದನಾಮದ ಕಾರಣಕ್ಕೆ ಕ್ರಿಮಿನಲ್ ಪ್ರಕರಣಕ್ಕೆ ಎಳೆದುತರುವುದು ಸರಿಯಲ್ಲ ಮತ್ತು ಇದು ನ್ಯಾಯದ ಅಪಹಾಸ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.



ಈ ಪ್ರಕರಣದಲ್ಲಿ, ಪ್ರತಿವಾದಿಗಳಾದ M/s ಪಂಚಮಿ ಸ್ಟೋನ್ ಕ್ವಾರಿ (PSQ) ಕಂಪೆನಯು ಮೇಲ್ಮನವಿದಾರರ ವಿರುದ್ಧ NI Actನ ಸೆಕ್ಷನ್ 138 ಮತ್ತು 141 ಅಡಿಯಲ್ಲಿ ದೂರು ಸಲ್ಲಿಸಿದ್ದರು.



ಬಳಿಕ, ಕಂಪನಿಗಳ ಕಾಯಿದೆ 2013 ರ ಅರ್ಥದೊಳಗೆ M/s MBL Infrastructure Limited ಎಂಬ ಕಂಪನಿಯನ್ನು ಆರೋಪಿ ಸಂಖ್ಯೆ.1 ಎಂಬುದಾಗಿ ಸೇರ್ಪಡೆ (Implead) ಮಾಡಲಾಗಿತ್ತು. ಆರೋಪಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರನ್ನು ಕ್ರಮವಾಗಿ ಆರೋಪಿ ಸಂಖ್ಯೆ 1 ಮತ್ತು 2 ಎಂದು ನಮೂದಿಸಲಾಗಿತ್ತು. ಮೇಲ್ಮನವಿದಾರರನ್ನು ಆರೋಪಿ ಸಂಖ್ಯೆ. 3, 4 ಮತ್ತು 5 ಎಂದು ಆರೋಪಿಸಲಾಯಿತು.



ಮೇಲ್ಮನವಿದಾರರು ಮಾಡಿದ ಕೆಲವು ಖರೀದಿ ಆದೇಶಗಳ ಪ್ರಕಾರ, ಆರೋಪಿ ಕಂಪನಿಗೆ PSQ ಕಂಪೆನಿಯು ಸರಕುಗಳನ್ನು ಪೂರೈಸಿದ್ದು, ಇದರ ಬೆಲೆ ಒಟ್ಟು ರೂ. 2,31,60,674/- ಆಗಿದ್ದು, ಅದಕ್ಕೆ ಬಿಲ್‌ ಕೂಡ ನೀಡಲಾಗಿತ್ತು. ಆ ಬಿಲ್ ವಿರುದ್ಧದ ಹೊಣೆಗಾರಿಕೆಯಲ್ಲಿ ಆರೋಪಿ ಕಂಪೆನಿಯು ರೂ. 1,71,08,512/ ಮೊತ್ತದ ಚೆಕ್ ನೀಡಿತ್ತು. ಈ ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಕಂಪೆನಿ PSQ ತನ್ನ ಬ್ಯಾಂಕರ್‌ನಿಂದ ಚೆಕ್‌ನ ಅಮಾನ್ಯದ ಇಂಟಿಮೇಷನ್ ಸ್ವೀಕರಿಸಿತ್ತು.



ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ:


SUNITA PALITA & OTHERS Vs M/S PANCHAMI STONE QUARRY


Ads on article

Advertise in articles 1

advertising articles 2

Advertise under the article