ದೂರು ನೀಡಲು ಬಂದ ಯುವತಿಯನ್ನು ಲೈಂಗಿಕ ಕ್ರಿಯೆಗೆ ಕರೆದ ಹೆಡ್ ಕಾನ್ಸ್ಟೇಬಲ್!
ದೂರು ನೀಡಲು ಬಂದ ಯುವತಿಯನ್ನು ಲೈಂಗಿಕ ಕ್ರಿಯೆಗೆ ಕರೆದ ಹೆಡ್ ಕಾನ್ಸ್ಟೇಬಲ್
ಠಾಣೆಗೆ ದೂರು ನೀಡಲು ಬಂದ ಯುವತಿಯನ್ನೇ ಪೊಲೀಸ್ ಸಿಬ್ಬಂದಿ ರೇಪ್ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ದೂರು ನೀಡಲು ಆಗಮಿಸಿದ ದೂರುದಾರರ ಮಗಳ ಜೊತೆ ಹೆಡ್ ಕಾನ್‌ಸ್ಟೇಬಲ್ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲ, ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಬಲವಂತದ ಸೆಕ್ಸ್‌ಗೆ ಒತ್ತಾಯಿಸಿದ್ದಾನೆ.
ನೀನು ನನ್ನ ಜೊತೆಗೆ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಮಾತ್ರ ನಿನ್ನ ತಂದೆ ನೀಡಿದ ಕೇಸ್ ನಿಮ್ಮ ಪರವಾಗಿ ಮಾಡಿಕೊಡುತ್ತೇನೆ ಎಂದು ಹೆಡ್ ಕಾನ್ಸ್ಟೇಬಲ್ ಆಮಿಷ ಒಡ್ಡಿದ್ದ. ಅಲ್ಲದೆ, ಪದೇ ಪದೇ ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದ ಎಂದು ದೂರು ನೀಡಿದ ಯುವತಿ ಆರೋಪ ಮಾಡಿದ್ದಾರೆ.
ಘಟನೆ ವಿಜಯ ನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಹೆಡ್ ಕಾನ್ಸ್ಟೇಬಲ್ ಮಾರಪ್ಪ ಎಂದು ಗುರುತಿಸಲಾಗಿದೆ.
ಈ ಪೊಲೀಸ್ ಸಿಬ್ಬಂದಿಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಲಾಗಿದೆ. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರೋಪಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ
ಲೈಂಗಿಕ ಕ್ರಿಯೆಗೆ ಸಮ್ಮತಿಸುವಂತೆ ಒತ್ತಾಯ ಮಾಡಿದ ಆರೋಪದ ಮೇರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.