ಹವಾಮಾನ ವ್ಯತ್ಯಯ ಹಿನ್ನೆಲೆ: ಸಿವಿಲ್ ಜಡ್ಜ್ ಮುಖ್ಯ ಲಿಖಿತ ಪರೀಕ್ಷೆ ಮುಂದೂಡಿಕೆ
ಹವಾಮಾನ ವ್ಯತ್ಯಯ ಹಿನ್ನೆಲೆ: ಸಿವಿಲ್ ಜಡ್ಜ್ ಮುಖ್ಯ ಲಿಖಿತ ಪರೀಕ್ಷೆ ಮುಂದೂಡಿಕೆ
ಸೆಪ್ಟಂಬರ್ 10 ಮತ್ತು 11, 2022ರಂದು ನಿಗದಿಯಾಗಿದ್ದ ಸಿವಿಲ್ ಜಡ್ಜ್ ಲಿಖಿತ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತಲು ಸುರಿದ ಧಾರಾಕಾರ ಮಳೆ ಹಾಗೂ ಹವಾಮಾನ ವ್ಯತ್ಯಯದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಬಿ. ಮುರಳೀಧರ ಪೈ ಅವರು ತಿಳಿಸಿದ್ದಾರೆ.
ಈ ಪರೀಕ್ಷೆಯನ್ನು ಮರುನಿಗದಿಗೊಳಿಸಿ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದ್ದು, ವಕೀಲರಿಗೆ ಸಿವಿಲ್ ಜಡ್ಜ್ ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನಾನುಕೂಲವಾಗುತ್ತಿದೆ. ಈ ಕಾರಣದಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಸಂಘ ಹಾಗೂ ಇತರ ವಕೀಲ ಸಂಘಗಳು ಮನವಿ ಮಾಡಿದ್ದವು.
ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಸಿವಿಲ್ ಜಡ್ಜ್ ಮುಖ್ಯ ಲಿಖಿತ ಪರೀಕ್ಷೆಯನ್ನು ಮುಂದೂಡಿ ಪ್ರಕಟಣೆ ಹೊರಡಿಸಿದೆ.