ಜಿಲ್ಲಾ ನ್ಯಾಯಾಧೀಶ ಮುರಳೀಧರ್ ಪೈ ಅವರಿಗೆ ಭಡ್ತಿ: ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ
ಜಿಲ್ಲಾ ನ್ಯಾಯಾಧೀಶ ಮುರಳೀಧರ್ ಪೈ ಅವರಿಗೆ ಭಡ್ತಿ: ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ
ಮಾನ್ಯ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಆಗಿ ಜಿಲ್ಲಾ ನ್ಯಾಯಾಧೀಶರಾದ ಬಿ ಮುರಳೀಧರ್ ಪೈ ಅವರನ್ನು ನಿಯುಕ್ತಿ ಮಾಡಲಾಗಿದೆ. ಮುರಳೀಧರ ಪೈ ಅವರು ಪ್ರಸ್ತುತ ಈ ಹುದ್ದೆಯಲ್ಲಿ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನಿರ್ದೇಶನದಂತೆ ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಕೆ ಎಸ್ ಭರತ್ ಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಹಿಂದೆ, ರಿಜಿಸ್ಟ್ರಾರ್ ಜನರಲ್ ಆಗಿದ್ದ ಟಿ ಜಿ ಶಿವಶಂಕರೇಗೌಡ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ ಜನರಲ್ ಹುದ್ದೆ ತೆರವಾಗಿತ್ತು.
ಅದೇ ರೀತಿ, ಜುಡೀಷಿಯಲ್ ರಿಜಿಸ್ಟ್ರಾರ್ ಜನರಲ್ ಆಗಿದ್ದ ಜೈಶಂಕರ್ ಅವರನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹಾಗಾಗಿ ಜುಡೀಷಿಯಲ್ ರಿಜಿಸ್ಟ್ರಾರ್ ಹುದ್ದೆ ಖಾಲಿಯಾಗಿದ್ದು, ಭರತ್ ಕುಮಾರ್ ಈ ಹುದ್ದೆಯನ್ನು ಪ್ರಭಾರಿ ಸ್ಥಾನದಲ್ಲಿ ನಿರ್ವಹಿಸುತ್ತಿದ್ದಾರೆ.