-->
No Concession to Sex Workers- ಕಾನೂನು ಉಲ್ಲಂಘಿಸಿದರೆ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ರಿಯಾಯಿತಿ ಇಲ್ಲ: ದೆಹಲಿ ಹೈಕೋರ್ಟ್

No Concession to Sex Workers- ಕಾನೂನು ಉಲ್ಲಂಘಿಸಿದರೆ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ರಿಯಾಯಿತಿ ಇಲ್ಲ: ದೆಹಲಿ ಹೈಕೋರ್ಟ್

ಕಾನೂನು ಉಲ್ಲಂಘಿಸಿದರೆ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ರಿಯಾಯಿತಿ ಇಲ್ಲ: ದೆಹಲಿ ಹೈಕೋರ್ಟ್






ಕಾನೂನು ಎಲ್ಲರಿಗೂ ಒಂದೇ... ಅದನ್ನು ಉಲ್ಲಂಘಿದರೆ ಶಿಕ್ಷೆ ತಪ್ಪಿದ್ದಲ್ಲ. ಇದಕ್ಕೆ ಲೈಂಗಿಕ ಕಾರ್ಯಕರ್ತರೂ ಹೊರತಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.



ಕಾನೂನು ಉಲ್ಲಂಘಿಸಿದರೆ, ಲೈಂಗಿಕ ಕಾರ್ಯಕರ್ತೆಯರಿಗೆ ವಿಶೇಷ ವಿನಾಯಿತಿ ನೀಡಲು ಸಾಧ್ಯವಿಲ್ಲ. ಅವರೂ ಸಾಮಾನ್ಯ ನಾಗರಿಕರಂತೆ ಶಿಕ್ಷೆ ಅನುಭವಿಸಲೇಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.



ದೆಹಲಿಯ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ ಬಂಧಿತರಾಗಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾ. ಆಶಾ ಮೆನನ್‌ ವಜಾಗೊಳಿಸಿದರು.



ಮೇಲ್ಮನವಿ ಸಲ್ಲಿಸಿದ ಅರ್ಜಿದಾರರ ಮೇಲೆ ಗಂಭೀರ ಆರೋಪಗಳಿವೆ. IPC ಕಲಂ 370 ಹಾಗೂ 372ರ ಅಡಿ ಪ್ರಕರಣ ದಾಖಲಾಗಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್, ಸಾಮಾನ್ಯ ನಾಗರಿಕರಂತೆ ಸಂವಿಧಾನ ಪ್ರಕಾರ ಎಲ್ಲಾ ಹಕ್ಕುಗಳನ್ನು ಪಡೆಯುವ ಅವಕಾಶ ಲೈಂಗಿಕ ಕಾರ್ಯಕರ್ತೆಯರಿಗೂ ಇದೆ ಎಂದು ಹೇಳಿದೆ. ಅದೇ ರೀತಿ, ಅವರು ಕಾನೂನು ಉಲ್ಲಂಘಿಸಿದ್ದೇ ಆದರೆ ಎಲ್ಲರಂತೆ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿತು.



ಕಾನೂನು ಪಾಲನೆ ವಿಚಾರದಲ್ಲಿ ಅವರಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.



ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಯ ವೃತ್ತಿಗೆ ದೂಡಿದ ಆರೋಪದಲ್ಲಿ ಲೈಂಗಿಕ ಕಾರ್ಯಕರ್ತೆಯನ್ನು 2021ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಇದೀಗ, ತಮ್ಮ ತಾಯಿಯ ಆಪರೇಷನ್ ಪ್ರಯುಕ್ತ ತುರ್ತು ಕಾರ್ಯಕ್ಕೆ ವಾರದ ಮಟ್ಟಿಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದರು.


Ads on article

Advertise in articles 1

advertising articles 2

Advertise under the article