-->
ಕೊರೋನಾ ಲಸಿಕೆ ಅಡ್ಡ ಪರಿಣಾಮದಿಂದ ಸಾವು: ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸಲು ವಿಪತ್ತು ಪ್ರಾಧಿಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಕೊರೋನಾ ಲಸಿಕೆ ಅಡ್ಡ ಪರಿಣಾಮದಿಂದ ಸಾವು: ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸಲು ವಿಪತ್ತು ಪ್ರಾಧಿಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಕೊರೋನಾ ಲಸಿಕೆ ಅಡ್ಡ ಪರಿಣಾಮದಿಂದ ಸಾವು: ಪರಿಹಾರಕ್ಕಾಗಿ ಮಾರ್ಗಸೂಚಿ ರೂಪಿಸಲು ವಿಪತ್ತು ಪ್ರಾಧಿಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ





ಕೊರೋನಾ ಎದುರಿಸಲು ಕೋವಿಡ್ ಲಸಿಕೆ ನೀಡಿದ ಬಳಿಕ ಅದರಿಂದ ಉಂಟಾದ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದವರನ್ನು ಗುರುತಿಸಲು ಮತ್ತು ಅದರಿಂದ ಸಂತ್ರಸ್ತರಾದವರ ಕುಟುಂಬಗಳಿಗೆ ಪರಿಹಾರ ನೀಡಲು ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.


ಪ್ರಕರಣ: ಸಯೀದಾ ಕೆ ಎ VS ಭಾರತ ಸರ್ಕಾರ

ಕೇರಳ ಹೈಕೋರ್ಟ್, WP(C) NO. 17628 OF 2022(C)


ಕೊರೋನಾ ಲಸಿಕೆಯ ಅಡ್ಡ ಪರಿಣಾಮದಿಂದ ಕೋವಿಡ್‌ ಲಸಿಕೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವ ಬಗ್ಗೆ ಸ್ವತಃ ನನ್ನ ಗಮನಕ್ಕೂ ಬಂದಿದೆ. ಈ ವರ್ಷದ ಜೂನ್‌ನಿಂದ ಹಾಗೆ ಸಾವನ್ನಪ್ಪಿದ ಕನಿಷ್ಠ ಮೂರು ಪ್ರಕರಣಗಳು ನನಗೆ ಚೆನ್ನಾಗಿ ಗೊತ್ತಿದೆ. ಇಂತಹ ಸಾವಿನ ಸಂಖ್ಯೆ ಕಡಿಮೆ ಇದ್ದರೂ ಇದೊಂದು ಗಂಭೀರ ವಿಷಯ ಹಾಗೂ ಇದಕ್ಕೆ ಸೂಕ್ತ ಉತ್ತರ ಸಿಗಲೇಬೇಕು ಎಂದು ನ್ಯಾ. ವಿ ಜಿ ಅರುಣ್ ತಿಳಿಸಿದರು.



ಕೋವಿಡ್ ಲಸಿಕೆಯ ಕಾರಣದಿಂದ ತಮ್ಮ ಪರಮಾಪ್ತರನ್ನು ಕಳೆದುಕೊಂಡ ಕನಿಷ್ಠ ಮೂರು ಪ್ರಕರಣಗಳನ್ನು ನಾನು ನನ್ನ ನ್ಯಾಯಾಲಯದಲ್ಲಿ ನೋಡಿದ್ದೇನೆ. ಇಂತಹ ಸಂಖ್ಯೆ ಕಡಿಮೆ ಇದ್ದರೂ ಲಸಿಕೆಯ ಅಡ್ಡ ಪರಿಣಾಮಕ್ಕೆ ಜನರು ಬಲಿಯಾಗುತ್ತಿದ್ದಾರೆ ಎಂದು ಶಂಕಿಸಲಾದ ಹಲವು ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿ ಪ್ರತಿವಾದಿಗಳು ಆ ರೀತಿಯ ಪ್ರಕರಣಗಳನ್ನು ಗುರುತಿಸಲು ಮತ್ತು ಸಂತ್ರಸ್ತರ ಅವಲಂಬಿತರಿಗೆ ಪರಿಹಾರ ನೀಡುವುದಕ್ಕಾಗಿ ನೀತಿ ರೂಪಿಸಲು ಬದ್ಧರಾಗಿರಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.



ಸದ್ರಿ ಪ್ರಕರಣದಲ್ಲಿ, 2021ರ ಆಗಸ್ಟ್ ನಲ್ಲಿ ಕೋವಿಡ್ ಲಸಿಕೆ ಪಡೆದ ನಂತರ ಪತಿಯನ್ನು ಕಳೆದುಕೊಂಡ ಸಂತ್ರಸ್ತ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. 



ಕೊರೋನಾ ಲಸಿಕೆಯ ಪ್ರತಿಕೂಲ ಪರಿಣಾಮಕ್ಕೆ ಮೃತರಾದವರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಬಳಿ ಯಾವುದೇ ನೀತಿಗಳಿವೆಯೇ ಎಂಬ ಬಗ್ಗೆ ತಿಳಿದುಕೊಳ್ಳುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿತ್ತು. ಆದರೆ, ಮುಂದಿನ ವಿಚಾರಣೆ ವೇಳೆ, ಪ್ರಕರಣ ಕೈಗೆತ್ತಿಕೊಂಡಾಗ, ASG ಇದುವರೆಗೆ ಅಂತಹ ಯಾವುದೇ ನೀತಿ ರೂಪಿಸಿಲ್ಲ ಎಂದಿದ್ದರು.


ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ನೀತಿ/ಮಾರ್ಗಸೂಚಿ ರೂಪಿಸಲು ತ್ವರಿತ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತು.


ಇದನ್ನು ಸಾಧ್ಯವಾದಷ್ಟು ತ್ವರಿತವಾಗಿ ಮತ್ತು ಯಾವುದೇ ರೀತಿಯಲ್ಲಾದರೂ ಸರಿ ಮೂರು ತಿಂಗಳೊಳಗೆ ಮಾರ್ಗಸೂಚಿ ರೂಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article