-->
NI Act Sec 138: ಆರೋಪಿ ಹೇಳಿಕೆ ದಾಖಲು ಮಾಡುವ ವೇಳೆ ದೂರುದಾರ ಹಾಜರಿ ಅಗತ್ಯವಿಲ್ಲ- ಹೈಕೋರ್ಟ್ ಆದೇಶ

NI Act Sec 138: ಆರೋಪಿ ಹೇಳಿಕೆ ದಾಖಲು ಮಾಡುವ ವೇಳೆ ದೂರುದಾರ ಹಾಜರಿ ಅಗತ್ಯವಿಲ್ಲ- ಹೈಕೋರ್ಟ್ ಆದೇಶ

NI Act Sec 138: ಆರೋಪಿ ಹೇಳಿಕೆ ದಾಖಲು ಮಾಡುವ ವೇಳೆ ದೂರುದಾರ ಹಾಜರಿ ಅಗತ್ಯವಿಲ್ಲ- ಹೈಕೋರ್ಟ್ ಆದೇಶ





ಚೆಕ್ ಬೌನ್ಸ್ ಪ್ರಕರಣ (NI Act Sec 138)ದಲ್ಲಿ ಆರೋಪಿ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ದೂರುದಾರರು ಖುದ್ದು ಹಾಜರಿರಬೇಕಾದ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ದೂರುದಾರರು ಹಾಜರಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.


ಪ್ರಕರಣ: ನಾಗರಾಜ್ Vs ಈಶ್ವರ್

ಕರ್ನಾಟಕ ಹೈಕೋರ್ಟ್ (ಕಲಬುರ್ಗಿ ಪೀಠ) Cr.A.2000 33/2022 Dated: 30-09-2022


ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಕಲಬುರ್ಗಿಯ ನಾಗರಾಜ್ ಎಂಬವರು ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರಿದ್ದ ನ್ಯಾಯಪೀಠ ಮಾನ್ಯ ಮಾಡಿದೆ.



ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ವಿಚಾರಣ ನ್ಯಾಯಕ್ಕೆ ಕಳುಹಿಸಿ ಕೊಟ್ಟಿರುವ ನ್ಯಾಯ ಪೀಠ, ದೂರು ರದ್ದುಪಡಿಸಿದ ಹಂತದಿಂದ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.



2022ರ ಅಕ್ಟೋಬರ್ 22 ರಂದು ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣದ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಆರೋಪಿ ಮತ್ತು ದೂರುದಾರರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.



ತೀರ್ಪಿನ ಪ್ರಮುಖಾಂಶ:

ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ. ಪ್ರಕರಣದ ಇತ್ಯರ್ಥಪಡಿಸಬೇಕೆಂಬ ಉದ್ದೇಶದಿಂದ ದೂರುದಾರ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ಇಟ್ಟುಕೊಂಡು ದೂರು ವಜಾ ಗೊಳಿಸಬಾರದು.


ಆದೇಶ ಹೊರಡಿಸುವ ಮುನ್ನ ಪ್ರಕರಣ ಯಾವ ಹಂತದಲ್ಲಿದೆ? ದೂರುದಾರರು ಮತ್ತು ಆರೋಪಿ ಯಾವಾಗ ಹಾಜರಾಗಿದ್ದರು? ಎಷ್ಟು ವರ್ಷಗಳಿಂದ ದೂರು ಬಾಕಿ ಇದೆ? ಪ್ರಕರಣದ ಸ್ವರೂಪ ಎಂತಹದು? ಎಂಬ ಅಂಶಗಳನ್ನು ನ್ಯಾಯಾಲಯ ಗಮನಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.


Click here to get the judgement:

ಪ್ರಕರಣ: ನಾಗರಾಜ್ Vs ಈಶ್ವರ್



Ads on article

Advertise in articles 1

advertising articles 2

Advertise under the article