-->
ಸುದ್ದಿ ಸಂಸ್ಥೆಯಿಂದ ವಜಾಗೊಂಡ ಉದ್ಯೋಗಿಯಿಂದ ದೂರು: ಕ್ರಿಮಿನಲ್ ಕೇಸು ರದ್ದುಪಡಿಸಿದ ಹೈಕೋರ್ಟ್

ಸುದ್ದಿ ಸಂಸ್ಥೆಯಿಂದ ವಜಾಗೊಂಡ ಉದ್ಯೋಗಿಯಿಂದ ದೂರು: ಕ್ರಿಮಿನಲ್ ಕೇಸು ರದ್ದುಪಡಿಸಿದ ಹೈಕೋರ್ಟ್

ಸುದ್ದಿ ಸಂಸ್ಥೆಯಿಂದ ವಜಾಗೊಂಡ ಉದ್ಯೋಗಿಯಿಂದ ದೂರು: ಕ್ರಿಮಿನಲ್ ಕೇಸು ರದ್ದುಪಡಿಸಿದ ಹೈಕೋರ್ಟ್






ಯಾವುದೇ ಒಂದು ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದು, ಆ ಕಾರಣಕ್ಕೆ ತನ್ನ ಉದ್ಯೋಗಿಗಳನ್ನು ಸಮರ್ಪಕ ಕಾರಣ ನೀಡಿ ಮುಂಚಿತವಾಗಿ ತಿಳಿಸಿ ಉದ್ಯೋಗದಿಂದ ಬಿಡುಗಡೆ ಮಾಡಿದರೆ ಅದು 'ವಿಶ್ವಾಸದ್ರೋಹ' ಮತ್ತು 'ವಂಚನೆ' ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ, ಆ ಸಂಸ್ಥೆ ವಿರುದ್ಧ ಈ ಆರೋಪಗಳ ಕ್ರಿಮಿನಲ್ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಕರಣ: ಸಮೀಯುಲ್ಲ ಬಿ. Vs ಕರ್ನಾಟಕ ರಾಜ್ಯ ಮತ್ತಿತರರು

ಕರ್ನಾಟಕ ಹೈಕೋರ್ಟ್, WP 9520/2022 Dated 19-09-2022



TTC ಎಂಬ ಖಾಸಗಿ ಸುದ್ದಿ ವಾಹಿನಿ 2018ರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಕೆಲ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆ ಮಾಡಿತ್ತು. ಸಾಕಷ್ಟು ಮುಂಚಿತವಾಗಿಯೇ ಕೆಲಸದಿಂದ ಬಿಡುಗಡೆ ಮಾಡುವ ವಿಷಯವನ್ನು ಕಂಪೆನಿಯ ಸಿಇಓ ಆಪ್ತ ಕಾರ್ಯದರ್ಶಿ ನೋಟೀಸ್ ಬೋರ್ಡ್‌ಗೆ ಹಾಕಿದ್ದರು. 



ಆಡಳಿತದ ಈ ಕ್ರಮವನ್ನು ಪ್ರಶ್ನಿಸಿ ಉದ್ಯೋಗ ಕಳೆದುಕೊಂಡ ಜಿ.ಎಸ್. ಮುತ್ತುರಾಜ್ ಎಂಬವರು ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಹೋರಾಟ ನಡೆಸಿದ್ದರು.



ಈ ಬಗ್ಗೆ 4ನೇ ACMM ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿದ್ದು, ಸದ್ರಿ ಕಂಪೆನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನ ರದ್ದುಪಡಿಸುವಂತೆ ಕೋರಿ TTC ಸುದ್ದಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ, ಉದ್ಯೋಗಿಗಳನ್ನು ಸೇವೆಯಿಂದ ಬಿಡುಗಡೆ ಮಾಡುವ ಸಾಕಷ್ಟು ಮೊದಲೇ ಸಕಾರಣ ನೋಟೀಸ್ ನೀಡಿದ್ದನ್ನು ಗಮನಿಸಿತು.


ಜೊತೆಗೆ ಸದ್ರಿ ನೋಟೀಸಿನಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾದರೆ ಮತ್ತೆ ಮರಳಿ ಎಲ್ಲರಿಗೂ ಉದ್ಯೋಗ ನೀಡುವ ಭರವಸೆ ನೀಡಿತ್ತು.


ಆರ್ಥಿಕ ಸಂಕಷ್ಟ ಎದುರಿಸುವ ಸಂಸ್ಥೆ ಸೂಕ್ತ ಕಾರಣ ನೀಡಿ ಕೆಲಸದಿಂದ ತೆಗೆದರೆ ಅಂತಹ ಸಂದರ್ಭಗಳಲ್ಲಿ ಉದ್ಯೋಗದಾತ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ TTC ಸುದ್ದಿ ವಾಹಿನಿ ಮೇಲಿನ ಪ್ರಕರಣವನ್ನು ರದ್ದುಗೊಳಿಸಿದೆ.




ಪ್ರಕರಣದ ವಿವರ

ಆರ್ಥಿಕ ಸಂಕಷ್ಟದ ಕಾರಣಕ್ಕೆ 2018ರಲ್ಲಿ ಟಿಟಿಸಿ ನ್ಯೂಸ್ ಚಾನೆಲ್ ತನ್ನ ಕೆಲ ಉದ್ಯೋಗಿಗಳನ್ನು ಕಿತ್ತು ಹಾಕಿತ್ತು. ಆಗ ಸಂತ್ರಸ್ರದಲ್ಲಿ ಒಬ್ಬರಾದ ಮುತ್ತುರಾಜ್ ಎಂಬ ಉದ್ಯೋಗಿ, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.



ಈ ದೂರನ್ನು ದಾಖಲಿಸಿಕೊಂಡ ಪೊಲೀಸರು IPC ಕಲಂ 406, 420, 506, 149 ಅಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. 




Ads on article

Advertise in articles 1

advertising articles 2

Advertise under the article