ಮೊಬೈಲ್ ಫೋನ್ ಮೂಲಕ ಅರ್ಜಿ ವಿಚಾರಣೆ: ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾದ ಸುಪ್ರೀಂ ಕೋರ್ಟ್ ಕಲಾಪ
ಮೊಬೈಲ್ ಫೋನ್ ಮೂಲಕ ಅರ್ಜಿ ವಿಚಾರಣೆ: ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾದ ಸುಪ್ರೀಂ ಕೋರ್ಟ್ ಕಲಾಪ
ಹಿರಿಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಅರ್ಜಿದಾರೆಯೊಬ್ಬರ ಅಹವಾಲನ್ನು ಮೊಬೈಲ್ ಫೋನ್ ಮೂಲಕ ನಡೆಸಿ ಇತಿಹಾಸ ಸೃಷ್ಟಿಸಿತು.
ಈ ಬಾರಿಯ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಗೆ ಹಾಜರಾಗದ ತಮ್ಮ ಪುತ್ರಿಗೆ ವೈದ್ಯಕೀಯ ಸೀಟು ನೀಡುವಂತೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನೌಕರರ ರಾಜ್ಯ ವಿಮಾ ನಿಗಮದ ಸಂಸ್ಥೆಯಲ್ಲಿ ವಿಮಾದಾರರ ಕೋಟಾದಡಿ ತಮ್ಮ ಪುತ್ರಿಗೆ ಪ್ರವೇಶ ಪಡೆಯಲು ಅವರು ಬಯಸಿದ್ದರು.
ಅರ್ಜಿದಾರರ ಅಹವಾಲನ್ನು ಮೊಬೈಲ್ ಫೋನ್ ಮೂಲಕ ಆಲಿಸಿದ ನ್ಯಾಯಪೀಠ, ಉದ್ಯೋಗ ಆಕಾಂಕ್ಷಿಗಳು ನೀಟ್ ಪರೀಕ್ಷೆಗೆ ಹಾಜರಾಗದ ಕಾರಣ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಿಲೇವಾರಿ ಮಾಡಿತು.
ಸದ್ರಿ ಪ್ರಕರಣದಲ್ಲಿ ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮಾನ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಸ್ಪಷ್ಟಪಡಿಸಿತು. ಕಲಾಪದಲ್ಲಿ ಅರ್ಜಿದಾರರು ಫೋನ್ ಮೂಲಕ ಭಾಗವಹಿಸಿದ್ದು ವಿಶೇಷವಾಗಿತ್ತು.
ನೀಟ್ ಪರೀಕ್ಷೆಯಲ್ಲಿ ಹಾಜರಾದ ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಕಲ್ಪಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.