ಐದನೇ ಶನಿವಾರ ಕಚೇರಿ ಕಲಾಪ ಕುರಿತು ಹೈಕೋರ್ಟ್ ಅಧಿಸೂಚನೆ
Thursday, October 13, 2022
ಐದನೇ ಶನಿವಾರ ಕಚೇರಿ ಕಲಾಪ ಕುರಿತು ಹೈಕೋರ್ಟ್ ಅಧಿಸೂಚನೆ
ಅಕ್ಟೋಬರ್ 2022ರ ಐದನೇ ಶನಿವಾರದ ಕಾರ್ಯಕಲಾಪ ಕುರಿತು ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟಿಸಿದೆ.
26-08-2022ರಂದು ಹೊರಡಿಸಿದ ಅಧಿಸೂಚನೆಯನ್ನು ತಿದ್ದುಪಡಿ ಮಾಡಲಾಗಿದ್ದು, 29-10-2022ರಂದು ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿ ವಿಭಾಗೀಯ ಪೀಠಗಳಿಗೆ ಕಲಾಪ ಸಹಿತ (ಸಿಟ್ಟಿಂಗ್ ಡೇ) ಕರ್ತವ್ಯದ ದಿನ ಎಂದು ಘೋಷಿಸಲಾಗಿದೆ.
ಈ ಹಿಂದೆ 15-10-2022ರಂದು ಕಲಾಪ ಸಹಿತ (ಸಿಟ್ಟಿಂಗ್ ಡೇ) ಕರ್ತವ್ಯದ ದಿನ ಎಂದು ಘೋಷಿಸಲಾಗಿತ್ತು. ಅದಕ್ಕೆ ಬದಲಾಗಿ ಐದನೇ ಶನಿವಾರವನ್ನು ಕರ್ತವ್ಯದ ದಿನ ಎಂದು ಘೋಷಿಸಲಾಗಿದೆ.