ಮಹಿಳೆಯನ್ನು ಐಟಂ ಎಂದು ಕರೆಯುವವರು ತಪ್ಪದೆ ಈ ಸುದ್ದಿ ಓದಲೇಬೇಕು..!
ಮಹಿಳೆಯನ್ನು ಐಟಂ ಎಂದು ಕರೆಯುವವರು ತಪ್ಪದೆ ಈ ಸುದ್ದಿ ಓದಲೇಬೇಕು..!
ಮಹಿಳೆ ಅಂದರೆ ಐಟಂ ಎಂದು ಹೇಳುವವರು ಅಥವಾ ಹೇಳಲು ಇಚ್ಚಿಸುವವರು ಖಂಡಿತವಾಗಿ ಈ ಸುದ್ದಿಯನ್ನು ಸಂಪೂರ್ಣ ಓದಲೇ ಬೇಕು...
'ಐಟಂ' ಎಂದು ಮಹಿಳೆಯನ್ನು ಕರೆದರೆ ಅದು ಆ ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದಂತೆ ಎಂದು ಮುಂಬೈ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆ ಪ್ರಕರಣದ ಆರೋಪಿಗೆ 1.5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿದೆ.
25 ಹರೆಯದ ಯುವ ಉದ್ಯಮಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಸಂಬೋಧಿಸಿದ್ದ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ವಿಚಾರಣೆ ಮುಕ್ತಾಯಗೊಂಡಿದೆ. ಇದು ಲೈಂಗಿಕ ಕಿರುಕುಳ ಎಂದು ತೀರ್ಪು ನೀಡಿದ ಮುಂಬೈ ನ್ಯಾಯಾಲಯ, ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಆತನಿಗೆ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನು ಘೋಷಿಸಿದೆ.
ಪ್ರಕರಣ: The State of Maharashtra VS Abrar Noor Mohammad Khan
ಮಹಿಳೆಯ ಕುರಿತು ತುಚ್ಛವಾಗಿ ಹೇಳಿಕೆ ನೀಡುವ ಇಂತಹ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆ ಮತ್ತು ಆಕೆಯ ಘನತೆಯನ್ನು ರಕ್ಷಿಸುವುದು ಮತ್ತು ಈ ರೀತಿಯ ವರ್ತನೆ ತೋರಿದ ರೋಡ್ ರೋಮಿಯೋಗಳಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಪ್ರಕರಣದ ತೀರ್ಪಿನಲ್ಲಿ ಮಾನ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಐಟಂ ಎಂಬ ಪದ ಮಹಿಳೆಯನ್ನು ಲೈಂಗಿಕ ಭೋಗವಸ್ತುವಾಗಿ ಚಿತ್ರಿಸುತ್ತದೆ. ಇದರಿಂದ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಘನತೆಗೆ ಚ್ಯುತಿ ತಂದ ಅಪರಾಧ ಘಟಿಸುತ್ತದೆ ಎಂದು ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್ ಜೆ ಅನ್ಸಾರಿ ತೀರ್ಪಿನಲ್ಲಿ ಹೇಳಿದ್ದಾರೆ.
ಯುವ ಉದ್ಯಮಿ ಕೂಡ ಇದೇ ತಪ್ಪನ್ನು ಮಾಡಿದ್ಧಾನೆ. ಆತನ ಅಸಂಬದ್ಧ ನಡೆಯನ್ನು ಕಠಿಣವಾಗಿ ನೋಡಬೇಕಾಗುತ್ತದೆ ಮತ್ತು ಮಹಿಳೆಯರನ್ನು ರಕ್ಷಿಸುವುದಕ್ಕಾಗಿ ಇಂತಹ ತೀರ್ಪು ಅನಿವಾರ್ಯ ಎಂದು ನ್ಯಾಯಾಲಯ ತನ್ನ 28 ಪುಟಗಳ ತೀರ್ಪಿನಲ್ಲಿ ಹೇಳಿದೆ.
Click here for the Judgement:
ಪ್ರಕರಣ: The State of Maharashtra VS Abrar Noor Mohammad Khan