![ಖಾತೆ ಬದಲಾವಣೆ: ಭೂಕಂದಾಯ ನಿಯಮಕ್ಕೆ ತಿದ್ದುಪಡಿ- ಗ್ರಾಮ ಲೆಕ್ಕಿಗರ ಹಿತಾಸಕ್ತಿ ನೋಟೀಸ್ ಅವಧಿ ಕಡಿತ ಖಾತೆ ಬದಲಾವಣೆ: ಭೂಕಂದಾಯ ನಿಯಮಕ್ಕೆ ತಿದ್ದುಪಡಿ- ಗ್ರಾಮ ಲೆಕ್ಕಿಗರ ಹಿತಾಸಕ್ತಿ ನೋಟೀಸ್ ಅವಧಿ ಕಡಿತ](https://blogger.googleusercontent.com/img/b/R29vZ2xl/AVvXsEjttGEmylGm8oKs51povqbPNsM_pt7LAyR3aZLbymxOy3JqkxMciOtL2U7oAujONWA9sm-DJsP6_YJNoE_-wSi0ZEPpLiYuj3cZ4Tlwpl3opZ-IV7f5nzTIIJgBWmnuD2qjgbXWPLy5cvVgv6k2FAdTrjdyoTUXirKTFaLM2Kvd4CsCdNXhPkPd4AbMgw/w640-h552/Seal_of_Karnataka.png)
ಖಾತೆ ಬದಲಾವಣೆ: ಭೂಕಂದಾಯ ನಿಯಮಕ್ಕೆ ತಿದ್ದುಪಡಿ- ಗ್ರಾಮ ಲೆಕ್ಕಿಗರ ಹಿತಾಸಕ್ತಿ ನೋಟೀಸ್ ಅವಧಿ ಕಡಿತ
ಖಾತೆ ಬದಲಾವಣೆ: ಭೂಕಂದಾಯ ನಿಯಮಕ್ಕೆ ತಿದ್ದುಪಡಿ- ಗ್ರಾಮ ಲೆಕ್ಕಿಗರ ಹಿತಾಸಕ್ತಿ ನೋಟೀಸ್ ಅವಧಿ ಕಡಿತ
ಕರ್ನಾಟಕ ಭೂ-ಕಂದಾಯ ನಿಯಮಗಳು (Land Revenue Rules) ನಿಯಮ 66ಕ್ಕೆ ಬದಲಾವಣೆ ಮಾಡಲಾಗಿದೆ.
ಈ ಹಿಂದೆ, ನಿಯಮಗಳ ಪ್ರಕಾರ ಯಾವುದೇ ಖಾತೆ ಬದಲಾವಣೆ ಮುನ್ನ, ಗ್ರಾಮ ಲೆಕ್ಕಿಗರು ಹಿತಾಸಕ್ತಿದಾರರಿಗೆ ನೋಟೀಸ್ ಜಾರಿ ಮಾಡಿ, ಹಿತಾಸಕ್ತಿದಾರರು ತಕರಾರು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡುತ್ತಾರೆ.
ನಿಯಮಗಳ ಪರಕಾರ, ಈ ಎಲ್ಲಾ ಪ್ರಕ್ರಿಯೆ ಮುಗಿದು ಖಾತೆ ವರ್ಗಾವಣೆಯಾಗಲು 45 ದಿನಗಳು ಬೇಕಾಗುತ್ತದೆ.
ಪ್ರಸ್ತುತ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 64(3) ಹಾಗೂ ನಿಯಮ 66 ಕ್ಕೆ, ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: RD 26 LGP 2022, ದಿನಾಂಕ: 29.09.2022ರನ್ವಯ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ದಿನಾಂಕ: 14.10.2022ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ಪ್ರಕಟಿಸಲಾಗಿರುತ್ತದೆ .
ಈ ಹಿನ್ನೆಲೆಯಲ್ಲಿ, ನಿಯಮ ತಿದ್ದುಪಡಿಯಿಂದ ಖಾತೆ ವರ್ಗಾವಣೆಗೆ ಆಕ್ಷೇಪಣೆ ಸಲ್ಲಿಸಲು ಕೇವಲ 7 ದಿನಗಳು ಮಾತ್ರ ಇರುತ್ತವೆ. ಇದರಿಂದಾಗಿ ಖಾತೆ ವರ್ಗಾವಣೆ ಪ್ರಕ್ರಿಯೆ 15 ದಿನಗಳ ಒಳಗಾಗಿ ಪೂರ್ಣಗೊಳ್ಳುತ್ತದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: RD 26 LGP 2022, ದಿನಾಂಕ: 29.09.2022