NI Act Sec 138: ಚೆಕ್ ನೀಡಿದಾತನ ಅನುಕೂಲಕ್ಕೆ ತಕ್ಕಂತೆ ಕೇಸ್ ಟ್ರಾನ್ಸ್‌ಫರ್ ಮಾಡಲಾಗದು: ಸುಪ್ರೀಂ ಕೋರ್ಟ್ ತೀರ್ಪು
NI Act Sec 138: ಚೆಕ್ ನೀಡಿದಾತನ ಅನುಕೂಲಕ್ಕೆ ತಕ್ಕಂತೆ ಕೇಸ್ ಟ್ರಾನ್ಸ್‌ಫರ್ ಮಾಡಲಾಗದು: ಸುಪ್ರೀಂ ಕೋರ್ಟ್ ತೀರ್ಪು
ಚೆಕ್ ಅಮಾನ್ಯ ಪ್ರಕರಣದ ವಿಚಾರಣೆಯನ್ನು ಆರೋಪಿಯ ಅನುಕೂಲಕ್ಕೆ ತಕ್ಕಂತೆ ಅವರಿಗೆ ಬೇಕಾದಲ್ಲಿ ನಡೆಸಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ಚೆಕ್ ನೀಡಿದ ಮಹಿಳೆ, ಎನ್.ಐ. ಕಾಯ್ದೆಯ ಸೆಕ್ಷನ್ 138ರಡಿ ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ವರ್ಗಾವಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾ. ಅಭಯ ಶ್ರೀನಿವಾಸ್ ಓಕ ನೇತೃತ್ವದ ಸುಪ್ರೀಂ ಕೋರ್ಟ್‌ನ ಏಕ ಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಆದರೆ, ಆರೋಪಿ/ಅರ್ಜಿದಾರರು ಹಿರಿಯ ನಾಗರಿಕರಾಗಿದ್ದು, ಮಹಿಳೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ವಿನಾಯಿತಿ ಪಡೆಯಬಹುದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅವಕಾಶ ಕಲ್ಪಿಸಿದೆ.
ದೂರನ್ನು ವರ್ಗಾವಣೆ ಮಾಡಲಾಗದು. ಆದರೆ, ಆರೋಪಿ ಮಹಿಳೆ ಮತ್ತು ಹಿರಿಯ ನಾಗರಿಕರು ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯದ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಲಾಗಿದೆ.
ಆದರೆ, ಹಾಜರಾತಿ ಕಡ್ಡಾಯ ಎಂಬ ಹಂತದಲ್ಲಿ ಅರ್ಜಿದಾರರನ್ನು ಖುದ್ದು ಹಾಜರಾಗಲು ತಿಳಿಸಬೇಕು ಎಂದು ಸೂಚಿಸಿ ಅರ್ಜಿದಾರರ ಮನವಿ ಅರ್ಜಿಯನ್ನು ವಜಾಗೊಳಿಸಿತು.