![ಮಂಗಳವಾರ (ಅಕ್ಟೋಬರ್ 25): ವ್ಯತಿರಿಕ್ತ ಆದೇಶ ಮಾಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ಮಂಗಳವಾರ (ಅಕ್ಟೋಬರ್ 25): ವ್ಯತಿರಿಕ್ತ ಆದೇಶ ಮಾಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ](https://blogger.googleusercontent.com/img/b/R29vZ2xl/AVvXsEgYdqzG6JHoXhU0GpX-9HDlT0uIeEeUGA1p1JiElHCpSoMTVzOKzGKHK7XCV56eX0WGhuaNSPi6vYP9Q1-u61wnnjw7lNkUHE1J9l8VUSwLj5uaLVRItCIdx_6U3cbc2YCBubeGrsAFT8X6EHZ0XvUc80lN0p188noXaM3LQeVBl6mI4-8xyzgPVYaH6A/w640-h338/high-court-karnataka.jpg)
ಮಂಗಳವಾರ (ಅಕ್ಟೋಬರ್ 25): ವ್ಯತಿರಿಕ್ತ ಆದೇಶ ಮಾಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ
ಮಂಗಳವಾರ (ಅಕ್ಟೋಬರ್ 25): ವ್ಯತಿರಿಕ್ತ ಆದೇಶ ಮಾಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ
ಸೋಮವಾರ ಮತ್ತು ಬುಧವಾರ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಇದೆ. ಆದರೆ, ಮಂಗಳವಾರ ಕೋರ್ಟ್ ಕಲಾಪ ಇರುತ್ತದೆ. ಆದರೆ, ಎಲ್ಲೆಡೆ ದೀಪಾವಳಿ ಸಂಭ್ರಮ ಇರುವ ಹಿನ್ನೆಲೆಯಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಗೆ ಗೈರು ಹಾಜರಾಗುವ ಸಾಧ್ಯತೆ ಇರುತ್ತದೆ.
ಇಂತಹ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ಮಂಗಳವಾರ (ಅಕ್ಟೋಬರ್ 25) ದಂದು ವ್ಯತಿರಿಕ್ತ ಆದೇಶ ಮಾಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಹಿಂದೆ, ದೀಪಾವಳಿ ಪ್ರಯುಕ್ತ ಎಲ್ಲ ನ್ಯಾಯಾಲಯಗಳಿಗೆ ರಜೆ ನೀಡುವಂತೆ ಬೆಂಗಳೂರು ವಕೀಲರ ಸಂಘ ಮಾನ್ಯ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಇದನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಹೈಕೋರ್ಟ್ ಈ ಸುತ್ತೋಲೆ ಹೊರಡಿಸಿದೆ.
ಒಂದು ವೇಳೆ, ರಾಜ್ಯದ ಯಾವುದೇ ನ್ಯಾಯಾಲಯದಲ್ಲೂ ವಕೀಲರು ಹಾಜರಾಗದಿದ್ದರೆ ವ್ಯತಿರಿಕ್ತ ಆದೇಶ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಹೈಕೋರ್ಟ್ ಜನರಲ್ ತಮ್ಮ 22-10-2022ರಂದು ಹೊರಡಿಸಿದ ನಿರ್ದೇಶನದಲ್ಲಿ ಸೂಚನೆ ನೀಡಿದ್ದಾರೆ.