ಬೀದಿ ನಾಯಿಗೆ ಆಹಾರ ನೀಡುವ ಶ್ವಾನಪ್ರಿಯರಿಗೆ ಕೆಟ್ಟ ಸುದ್ದಿ: ಅದು ಅಪರಾಧ, ದಂಡ ಕಟ್ಟಿ ಎಂದ ಹೈಕೋರ್ಟ್
ಬೀದಿ ನಾಯಿಗೆ ಆಹಾರ ನೀಡುವ ಶ್ವಾನಪ್ರಿಯರಿಗೆ ಕೆಟ್ಟ ಸುದ್ದಿ: ಅದು ಅಪರಾಧ, ದಂಡ ಕಟ್ಟಿ ಎಂದ ಹೈಕೋರ್ಟ್
ಸಾರ್ವಜನಿಕ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಅನ್ನ, ಆಹಾರ ನೀಡುವ ನಾಗರಿಕರ ವಿರುದ್ಧ ಮುಂಬೈ ಹೈಕೋರ್ಟ್ ಗರಂ ಆಗಿದೆ.
ಒಂದೋ ನೀವು ಅದನ್ನು ದತ್ತು ತೆಗೆದುಕೊಂಡು ಮನೆಗೆ ಕರೆದೊಯ್ದು ಸಾಕಬೇಕು, ಇಲ್ಲವೇ ಅವುಗಳ ನೋಂದಣಿ, ನಿರ್ವಹಣಾ ವೆಚ್ಚ ಭರಸಿ ಶ್ವಾನ ಕೇಂದ್ರದಲ್ಲಾದರೂ ಇರಿಸಬೇಕು. ಅದು ಬಿಟ್ಟು ಬೀದಿಗೆ ಬಂದು ಅದಕ್ಕೆ ಆಹಾರ ನೀಡುವುದು ಅಪರಾಧ ಎಂದು ಮುಂಬೈ ಹೈಕೋರ್ಟ್ ನಾಗಪುರ ಪೀಠ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ವಿಜಯ ಶಂಕರ್ ರಾವ್ ತಲೇವರ್ Vs ಮಹಾರಾಷ್ಟ್ರ
ಬಾಂಬೆ ಹೈಕೋರ್ಟ್ ನಾಗಪುರ ಪೀಠ
ಶ್ವಾನ ಪ್ರಿಯರ ಇಂತಹ ಕಾಳಜಿಯಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತದೆ. ಹಾಗಾಗಿ, ಸಾರ್ವಜನಿಕ ಸ್ಥಳದಲ್ಲಿ ಶ್ವಾನಕ್ಕೆ ಆಹಾರ ನೀಡುವ ಬೇಜವಾಬ್ದಾರಿ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ರಸ್ತೆಗಳಲ್ಲಿ ಶ್ವಾನಕ್ಕೆ ಅನ್ನಾಹಾರ ನೀಡುವ ಬೇಜವಾಬ್ದಾರಿ ನಾಗರಿಕರ ವರ್ತನೆಯಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಅಂಥವರ ವಿರುದ್ಧ ರೂ. 200ಕ್ಕೆ ಮೀರದಂತೆ ದಂಡ ವಿಧಿಸಬೇಕು ಎಂದು ವಿಭಾಗೀಯ ನ್ಯಾಯಪೀಠ ಆದೇಶ ನೀಡಿತು.
ತಾವು ದೊಡ್ಡ ಸಮಾಜ ಸೇವಕರು, ಬೀದಿನಾಯಿಗಳ ಪರ ಅಪಾರ ಕಾಳಜಿ, ಪ್ರೀತಿ ಉಳ್ಳವರು ಎಂದು ಶ್ವಾನ ಪ್ರಿಯರು ತೋರಿಸಿಕೊಳ್ಳುತ್ತಾರೆ. ಆದರೆ, ಇದರಿಂದ ಇನ್ನೊಂದೆಡೆ ಆಗುತ್ತಿರುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ. ಕೆಲವು ನಾಯಿಗಳು ವ್ಯಗ್ರಗೊಂಡು ಪುಟಾಣಿ ಮಕ್ಕಳ ಮೇಲೆ ಹಿಂಸಾತ್ಮಕವಾಗಿ ವರ್ತಿಸುತ್ತವೆ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.
ಶ್ವಾನಪ್ರಿಯರಿಗೆ ಬೀದಿನಾಯಿಗಳ ಬಗ್ಗೆ ನೈಜ ಕಾಳಜಿ ಇದ್ದರೆ ಅದನ್ನು ಕರೆದೊಯ್ದು ಮನೆಯಲ್ಲಿ ಸಾಕಲಿ.. ಇಲ್ಲವೇ ಶ್ವಾನ ಕೇಂದ್ರಕ್ಕೆ ನೀಡಲಿ. ಇದು ಅವರು ಶ್ವಾನಗಳಿಗೆ ಮಾಡುವ ನಿಜವಾದ ಕಾಳಜಿ ಮತ್ತು ಮೂಲಭೂತ ಕರ್ತವ್ಯ ಎಂದು ನ್ಯಾಯಪೀಠ ಹೇಳಿತು.
ನಾಗಪುರ ನಗರ, ಆಸುಪಾಸಿನ ಸಾರ್ವಜನಿಕ ಸ್ಥಳಗಳು, ಪಾರ್ಕ್‌ಗಳು ಮುಂತಾದೆಡೆ ಬೀದಿ ನಾಯಿಗಳಿಗೆ ಆಹಾರ ನೀಡಬಾರದು ಎಂದು ಪೀಠ ನಿರ್ದೇಶಿಸಿದೆ.
Click Here for Judgement Copy
ಪ್ರಕರಣ: ವಿಜಯ ಶಂಕರ್ ರಾವ್ ತಲೇವರ್ Vs ಮಹಾರಾಷ್ಟ್ರ